Submission 7428

ಅವಳು!

ರಚನೆ : ರವಿಕುಮಾರ ಎಂ ಎಂ

----------------------------------

ಅವಳು ಬರುವ ದಾರಿಯಲ್ಲಿ ಮೊಗ್ಗೊಂದು ಅರಳಿ ಹೂವಾಗಿತ್ತು ನದಿಯೊಂದು ಹರಿದು ಭುವಿ ತಂಪಾಗಿತ್ತು ಇಬ್ಬನಿಯ ಮೇಘವು ಸೋನೆ ಸುರಿಸಿತ್ತು ರವಿಯ ಕಿರಣವು ದಾರಿಯುದ್ದಕ್ಕೂ ರಂಗವಲ್ಲಿಯ ಹಾಕಿತ್ತು.. ಅವಳು ಸಾಗುವ ದಾರಿಯಲ್ಲಿ ಕುಸುಮದಳಗಳ ಜಮಖಾನ ಹಾಸಿತ್ತು ಮಯೂರವು ನಾಟ್ಯವಾಡುತ್ತ ಸ್ವಾಗತಿಸಿತ್ತು ಸೇವಂತಿಗೆಯು ಪರಿಮಳಬೀರಿ ಮತ್ತೇರಿಸಿತ್ತು ಗಿಳಿ-ಕೋಗಿಲೆಗಳ ಕಲರವ ಕಿವಿಗಳಿಗೆ ಇಂಪಾಗಿತ್ತು ಅವಳಂದವ ನೋಡಿ ಹೃದಯ ಹಳಿತಪ್ಪಿತ್ತು ಇಷ್ಟೆಲ್ಲಾ ನೋಡಿ ಒಲವಾಗಿ ಇನ್ನೇನು ಅವಳಿಗೆ ನನ್ನೆಲ್ಲಾ ಭಾವನೆ ಹೇಳಬೇಕೆನ್ನುವಷ್ಟರಲ್ಲಿ ಅವಳ ಎಂಗೇಜಮೆಂಟ್ ಆಗೋಗಿತ್ತು...

----------------------------------

ನೋಂದಣಿ ಐಡಿ : KPFS2-2380

0
Votes
94
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top