Submission 7426

ಭೂಮಿ ಹುಣ್ಣಿಮೆ

ರಚನೆ : ವಿಶ್ವಭಾರತಿ ಜಿ. ಓ.

----------------------------------

ನಮ್ಮ ಹೊರೆಯ ಹೊರುವ ಧರೆಗೆ ನಮ್ಮನೆಲ್ಲ ಪೊರೆವ ಇಳೆಗೆ ಹಸಿರ ಸಿರಿಯ ತಾಯಿಗೆ ಪೂಜೆಗೈವ ಎಲ್ಲರೊಂದಿಗೆ ಸಡಗರದಿ ಕುಣಿಯುತಿಹರು ಹುಣ್ಣಿಮೆಗೆ ಚಪ್ಪರವ ಹಾಕುವರು ಮುಂಜಾವಿಗೆ ಸಿಂಗರಿಸಲು ಬೇಕು ಮಲ್ಲಿಗೆ ಸೇವಂತಿಗೆ ಕಂಕಣ ಕಟ್ಟಿ ಎಲ್ಲ ಹೊರಟಿಹರು ತೋಟ ಗದ್ದೆಗೆ ಮೊಸರುಬುತ್ತಿ ಖಾರಬುತ್ತಿ ಸಿಹಿಗೆ ಬೇಳೆಹೋಳಿಗೆ ಕೀಲಸವು ಸುಳಿ ಸುಳಿ ಕಡಲೆ ಉಸುಳಿ ನೆಂಚಿಕೆಗೆ ಹಪ್ಪಳ ಸಂಡಿಗೆ ಗಾರಿಗೆಯ ಖುಷಿಯು ಮಕ್ಕಳಿಗೆ ಅಕ್ಕಿ ಹುಗ್ಗಿ ತಿನ್ನುವ ಜಗ್ಗಿ ಕೂಡಿ ಎಲ್ಲರೊಂದಿಗೆ ಭೂತಾಯಿಗೆ ನಮಿಸುವುದೇ ಹೊಂಬಗೆ ಬನ್ನಿ ಸಂಭ್ರಮದಿ ಸೇರುವ ಭೂಮಿ ಹುಣ್ಣಿಮೆಗೆ

----------------------------------

ನೋಂದಣಿ ಐಡಿ : KPFS2-2379

0
Votes
91
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top