ಗಿಳಿಯು ತಂದ ಪ್ರೇಮ ಸಂದೇಶ
ರಚನೆ : ಡಾ. ಅಕ್ಷಯ್ ವೈ.ಪಿ
----------------------------------
ಮುಗಿಲೆತ್ತರದಿಂದ ಬಂದ ಗಿಳಿಯೊಂದು ನನ್ನ ಹುಡುಕುತಾ ಸಂದೇಶವೊಂದು ತಂದಿರುವೆ ನಾ ನಿನಗೆ ಎನ್ನುತಾ ಅವಳಿಗೂ ನೀನೆಂದರೆ ಬಹಳ ಇಷ್ಟವಂತೆ ಎಂದು ಹೇಳಿತು ಕೂಗುತಾ ಗಿಳಿಯು ಹಾಡಿತು ನಮ್ಮಿಬ್ಬರ ಅನುರಾಗವ ಕುಣಿಯುತಾ ಮರಗಿಡ - ಬಳ್ಳಿ ಪ್ರಾಣಿ ಪಕ್ಷಿಗಳಿಗೂ ತಿಳಿಸುತಾ ಗಿಳಿಯು ನಮ್ಮಿಬ್ಬರ ಪ್ರೇಮವ ಹೇಳುತ ಹಾರಿತು ನಲಿಯುತಾ
----------------------------------
ನೋಂದಣಿ ಐಡಿ : KPFS2-2377