Submission 7360

ಕಾಲುಂಗುರ

ರಚನೆ : ಕಾ ವಿ ರಮೇಶ್ ಕುಮಾರ್

----------------------------------

ಜೀವನವೇ ನವರಸವು ನೆಲೆಯಿರಲು ನಲ್ಮೆಯಲಿ ಕಾಣಿಸುತ್ತಿದೆ ವೈಭವವು ಪ್ರೀತಿಸುವ ಹೃದಯದಲಿ ಸುಮಂಗಲೆಗೆ ಶೋಭಿಸುವ ಶ್ರೀಮಂತ ಸಿಂಗಾರವು ಸಂಪ್ರದಾಯದ ಐದನೇ ಪ್ರಕ್ಷೇಪಿಸುವ ಆಭರಣವು ಮಂತ್ರಘೋಷಗಳ ನಡುವೆ ಧರಿಸುವ, ಮಂಗಳಕರ ಬದುಕಿನ ಹೊಸಬಾಳಿಗೆ ಸೌಭಾಗ್ಯವು ಕಾಲುಂಗುರ ತೊಡುವ ಕಾಲ್ಬೆರಳುಗಳ ಅಲಂಕರಿಸಿ ಮೆರೆಸುತ್ತಿದೆ ಅನುಭವಿಸೋ ಮಹದಾನಂದ ನನಗಿಂದು ತಂದಿದೆ ಕಟ್ಟಿಕೊಂಡ ಕನಸುಗಳಿಗೆ ಇನಿಯನೊಲವ ಸುಧೆಯು ಎದೆಗೂಡಿನ ರಾಗಗಳಿಗೆ ಮನದೊಳಗೆ ಕಲ್ಪನೆಯು ಹರುಷವು ಚಿಮ್ಮುತ್ತಿದೆ ಹೂಮನವು ಬಯಸಿದಂತೆ ಮತ್ತಿನ್ನೇನು ಬೇಕಿಲ್ಲ ಜೊತೆಯಿದ್ದರಷ್ಟೇ ಸಾಕಂತೆ

----------------------------------

ನೋಂದಣಿ ಐಡಿ : KPFS2-2334

0
Votes
89
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top