Submission 7356

ನನ್ನೊಳಗಿನ 'ನಾನು'

ರಚನೆ : ಸೃಷ್ಟಿ ಗಿಡ್ಡಳ್ಳಿ

----------------------------------

ಭಾವಾಂತರ್ಯದ ಅರಿವಿನಲಿ ಜಗದ ವಾದ-ಪ್ರತಿವಾದಗಳು ಮಥಿಸಿದಾಗ ನನ್ನೊಳಗಿನ 'ನಾನು' ಮತ್ತೆ ಉಸಿರಾಡಿತು! ಉಸಿರಿನ ಏರಿಳಿತದಲ್ಲೊಂದು ವಿಶ್ವಾಸ ಮೂಡಿತು ಆ ವಿಶ್ವಾಸ ಧೈರ್ಯವೆಂಬ ಧಾರೆಯ ಸೇರಲು ಹವಣಿಸಿತು ನನ್ನೊಳಗಿನ 'ನಾನು' ತನ್ನೊಳಗೆ ತಾನು ಕಣ್ತೆರೆಯುತ್ತಿರುವ‌ ಮಗುವಂತೆ ಜಗವನ್ನು ನೋಡುತ್ತಿದೆ "ಎಡಬಲ"ಗಳ ಭಾವೋದ್ವೇಗಗಳ ಧಗಧಗಿಸುವ ಜ್ವಾಲೆಯ ಶಾಖಕೆ ನಟ್ಟನಡುವಲ್ಲಿಯೇ ಎತ್ತಲೂ ಹೋಗದೇ ಅಂಬೆಗಾಲಿಡಲೂ ಭಯಪಡುತ್ತಿದೆ ನೆಮ್ಮದಿಯ ನದಿಯೊಂದು ಇಹುದೇನೋ... ಎಲ್ಲೋ ದೂರದಲ್ಲಿ ಶಾಂತಿ ಸಿಗಬಹುದೇನೋ.... ತಂಪಾದ ತೀರದಲ್ಲಿ ಇಟ್ಟಿಹುದು ಪ್ರಥಮ ಹೆಜ್ಜೆ ಪುಟ್ಟ ಪಾದಗಳಲ್ಲಿ ಎತ್ತಲೂ ನೋಡದೇ ಸಾಗಬೇಕಿದೆ ಯಾರೂ ತೋರದ ಇನ್ಯಾರದೂ ಹೆಜ್ಜೆ ಗುರುತುಗಳಿಲ್ಲದ ನನ್ನದೇ ದಾರಿಯಲ್ಲಿ!

----------------------------------

ನೋಂದಣಿ ಐಡಿ : KPFS2-2332

0
Votes
105
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top