Submission 7224

ಅಧ್ಯಾತ್ಮ

ರಚನೆ : ರಮೇಶ ಟಿ.ಎಂ.

----------------------------------

ಜೀವಕೆ ಮಿಡಿತ ಕೊಲೆಗೆ ತುಡಿತ ಹೂಗಿಡಕೆ ಸ್ವಾಗತ ಖನಿಜಕ್ಕಗೆತ ಜೀವಜಾಲದ ವೈರುಧ್ಯಗಳನವರತ ನೀರು ಆವಿ ಬಂಡೆಯದು ಮಣ್ಣು ರಸೆಯಂತದಲಿ ರವಿಚಂದ್ರ ಕಣ್ಣು ಮೊಳೆಸುವುದು ಜೀವಗಳ ಪ್ರಾಣ ದ್ವೇಷದಲಿ ಪ್ರೀತಿ ಪ್ರೀತಿಯಲಿ ದ್ವೇಷ ಜನುಮ ಹರುಷ ಶ್ರಾದ್ಧೋದಕ ಶೇಷ ಬಾಳಸಿಹಿಕಹಿ ವಿಷವಮೃತ ಪಾಶ ಹೆಣಕೆ ಹೂಹೊಗಳಿಕೆ ಹೊದ್ದುಬೆಚ್ಚಗೆ ಚುಚ್ಚಿದ ಸೂಜಿ ಕಿತ್ತು ಹಾಕು ಹೊಲಿಗೆ ಬಾಳಬಟ್ಟೆಯಲಿ ಹರಿದ ಸೀರೆಗೆ ಇದ್ದರಿಲ್ಲವಾಗುವ ಇಲ್ಲವಾಗದಿರುವ ವೈರುಧ್ಯದರಿವು ನಿಜದಿರವ ಬಾಳು

----------------------------------

ನೋಂದಣಿ ಐಡಿ : KPFS2-2223

0
Votes
89
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top