Submission 7222

ಯಾರಾಗುವನು ಕವಿ?

ರಚನೆ : ಅದ್ವಿತ್ ಎನ್ ನಾಯಕ

----------------------------------

ಯಾರಾಗುವನು ಕವಿ ? ಯಾರಾಗುವನು ಕವಿ? ನಾವೀನ್ಯತೆಯಲಿ ಸಾಗುವ ಉದಯರವಿಯವನು ಹೊಂಗನಸ ಹೊತ್ತ ಉದಯೋನ್ಮುಖ ಕವಿಯವನು ದೃಷ್ಟಾಂತ ದೃಷ್ಟಿಕೋನಗಳ ತಾಳಮೇಳವ ಅರಿತವನು ಸೃಷ್ಟಿಯ ವಿಶಿಷ್ಠ ಲಕ್ಷಣಗಳನು ಅವಲೋಕಿಸುವವನು ವಿಭಿನ್ನ ವಿಶೇಷ ವಿಚಾರಗಳನು ಆಲೋಚಿಸುವವನು ಇಂಧನವಿಲ್ಲದೆಯೇ ಕಲ್ಪನೆಯ ರೈಲ ಓಡಿಸಿದವನು ಕ್ಷಿಪಣಿಗಳಿಲ್ಲದೆಯೇ ನಭಕ್ಕೆ ಜಿಗಿದವನು ಕುಂತಲ್ಲಿಯೇ ಸಪ್ತಸಾಗರಗಳ ದಾಟಿದವನು ಸತ್ಯಾಸತ್ಯತೆಯನ್ನು ಸುಜ್ಞಾನದಿಂದ ಪರೀಕ್ಷಿಸಿದವನು ಸೊಗಸಾದ ಸಮಾಜವೊಂದ ನಿರೀಕ್ಷಿಸಿದವನು ಬರಿಮಾತಲ್ಲೇ ದೇವಲೋಕವ ಧರೆಗಿಳಿಸಿದವನು ಭಾವನೆಗಳನು ಬರಹಗಳಾಗಿ ಬಿತ್ತಿದವನು ತನಗರಿಯದೇ ಪರರ ಕಣ್ಣಲ್ಲಿ ಕವಿಯಾದವನು

----------------------------------

ನೋಂದಣಿ ಐಡಿ : KPFS2-2222

0
Votes
87
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top