ಪ್ರೀತಿಯ ಕರ್ತವ್ಯ
ರಚನೆ : ಶ್ರೀರಾಮ ಸುರೇಶ ಹೆಗಡೆ
----------------------------------
ನನ್ನೊಲವೇ ನಾ ಗೀಚಿದ ಪ್ರೀತಿಯ ಸಾಲಿದು ಕೈ ಹಿಡಿದು ನಡೆಯುವಾಗ ನನ್ನ ಜೊತೆಯಾಗಿರು ಸಂಸಾರದ ಪಥದಲ್ಲಿ ಕರ್ತವ್ಯ ಬಂಧನ ವಿರಲಿ ಸಂಗಾತಿಯಾಗಿ ಹರುಷದಿ ಸಾಗಲಿ ಜಾಣ್ಮೆಯ ನಡೆ ಹೊಸ ದಾರಿಯಲಿ ಅರಿವಿನ ಹೆಜ್ಜೆಗಳ ಓಟ ಪ್ರೀತಿ ತುಂಬಿದ ಈ ಬಾಳಿನಲ್ಲಿ ಸಂಸ್ಕಾರ ಸದಾ ಇರಲಿ ಮನೆಯ ಗೌರವಕ್ಕೆ ಅಂಗಳದಿ ಶ್ರೇಷ್ಠತೆಯು ಸೇರಲಿ ನಿನ್ನ ಆಸೆ ನನಗೆ,ನನ್ನ ಕೆಲಸ ನಿನಗೆ ಸಂಪಾದನೆ ಆಗಲಿ ಬದುಕಿನ ಸಂತೋಷದಲ್ಲಿ ಸಮಪಾಲು ಇರಲಿ ಅನುಭವಿಸುವ ಹಂಚಿ ಕೊಳ್ಳುವ ಸಿಹಿ ಸಮ್ಮೇಳನ ಇದು ಭರವಸೆಯ ಕುಡಿಗೆ ನಾವೇ ಉತ್ತಮ ಬದುಕಿನ ಸಾಧಕರು ಇಡೀ ಜಗತ್ತಿಗೆ ಮಾದರಿ ಜೀವನ ಸಂದೇಶ ಸಾರಲಿ ಈ ಪ್ರೇಮದ ಗುಬ್ಬಚ್ಚಿ ಗೂಡಿನ ನಲ್ಮೆಯ ಮರಿಗಳು ಪ್ರೀತಿ ವಿಶ್ವಾಸದ ತವರಿನ ನಮ್ಮಿಬ್ಬರ ಜೀವನ ಗೆಲ್ಲಲಿ."
----------------------------------
ನೋಂದಣಿ ಐಡಿ : KPFS2-2218