Submission 7206

ಹೇಳು ನಾ ಹೇಗಿರಲಿ..?

ರಚನೆ : ಕಲ್ಪಶ್ರೀ

----------------------------------

ಹೇಳು ನಾ ಹೇಗಿರಲಿ, ನೀನಿಲ್ಲದ ಆ ಕ್ಷಣದಲ್ಲಿ ನೀನಿರುವ ಕ್ಷಣವೆಲ್ಲಾ, ನಿನ್ನುಸಿರ ಏರಿಳಿತದಲ್ಲಿ ನೀನಿರೆ ಆ ನಗು, ಇಲ್ಲದಿರೆ ಮರುಕಳಿಸುವ ನೆನಪು ಕಾಡುತಿದೆ ಅನುಕ್ಷಣವು ನನ್ನನು ಹೀಗಿರಲು, ಹೇಳು ನಾ ಹೇಗಿರಲಿ..? ಏನೊಂದೂ ಹೇಳದೆ ನೀ ಹೋದೆ, ಆದರೂ ನಾ ಕಾಯುತಿರುವೆ ಕತ್ತಲು ಕಳೆದು, ಬೆಳಗು ಹರಿಯುವವರೆಗೂ ಚಂದಿರ ಕರಗಿ ಮತ್ತೆ ತುಂಬುವವರೆಗೂ ಎಳೆಗಳುದುರಿ ಪುನಃ ಚಿಗುರುವವರೆಗೂ..! ಹೀಗೆ ನಾ ಕಾಯುತಲಿರುವೆ ನಿನಗಾಗಿ, ನಿನ್ನ ಉಸಿರಿಗಾಗಿ, ನೀನುಸುರುವ ನನ್ನ ಹೆಸರಿಗಾಗಿ ಆದರೂ, ಹೇಳು ಒಲವೇ ನಾ ಹೇಗಿರಲಿ ನೀನಿಲ್ಲದೆ, ಈ ಹೃದಯ ಬಡಿತದ ಜೊತೆಯಲ್ಲಿ..!

----------------------------------

ನೋಂದಣಿ ಐಡಿ : KPFS2-2208

0
Votes
92
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top