ಅಕ್ಷಯ ಅಕ್ಷರದೀಪ
ರಚನೆ : ಜಿ.ಹೆಚ್.ಸಂಕಪ್ಪ ಮೈಸೂರು
----------------------------------
ಕೈಮುಗಿದು ಓದುವ ಪುಸ್ತಕ ಬರಿ ಹಾಳೆಯಲ್ಲ ಪುಟ ತೆರೆದಂತೆ ಮನಸ್ಸು ಮುಕ್ತ ಶಾಂತಚಿತ್ತ ಶಾರದಾನಾದ ಬ್ರಹ್ಮರ್ಷಿಗಳ ಜ್ಞಾನಬೋಧ ಅಕ್ಷರ ಸುಧಾಮೃತ ಕಲಶದ ನಂದಾದೀಪ ಅನಂತ ಲೋಕಗಳ ದ್ವಾರ ತೆರೆವ ಸಾಧನ ಮನುಜನ ಅಕ್ಷಯಧನ ಮೋಕ್ಷ ಹಾದಿಜ್ಞಾನ ಒಂಟಿತನದ ಮೌನ ಸಂಗಾತಿ ಬುದ್ಧಿ ಸಿದ್ಧಿಧಾತ್ರಿ ತಮದಿಂ ಬೆಳಕಿಗೆ ಕರೆದೊಯ್ವ ಪರಂಜ್ಯೋತಿ ಯುಗಗಳ ಇತಿಹಾಸ ಹೇಳುವ ಪುಟಗಳು ವೇದ ಪುರಾಣ ಜ್ಞಾನ ವಿಜ್ಞಾನ ಸಂಪುಟಗಳು ಸರಿದ ಕಾಲಘಟ್ಟಗಳ ಸ್ಮರಣ ಸಂಚಿಕೆಗಳು ವರ್ತಮಾನಕೆ ನವಭಾಷ್ಯ ಬರೆವ ಭವಿಷ್ಯಗಳು ಮನುಜ ಮನದ ಪರಿವರ್ತನೆಯ ಸಾಧನ ಪುಟಪುಟವೂ ಆರಾಧನೆಯ ಅನಂತಯಾನ
----------------------------------
ನೋಂದಣಿ ಐಡಿ : KPFS2-2207