Submission 7198

ಕನ್ನಡ ಪುಟ್ಟರಾಜೇಶ್ವರಿ

ರಚನೆ : ರೇವಣಸಿದ್ದಯ್ಯ ಹಿರೇಮಠ

----------------------------------

ಭಾರತೀಯ ಭಾಷೆಯಲ್ಲಿ ಕನ್ನಡಕ್ಕೆಂಟು ಜ್ಞಾನಪೀಠಗಳು | ಬಾಳು ಭೂಮಿಯಿರುವ ತನಕ ಬೆಳಗಲಿ ಕನ್ನಡದ ಕೃತಿಗಳು॥ಪ॥ ಕನ್ನಡದ ಮೊದಲ ಶಾಸನವೆಂದರೆ ಹಲ್ಮಡಿ ಶಾಸನ | ಕೆಂಪು ಹಳದಿ ಬಣ್ಣವು ಶೋಭಿಸುವದು ಲಾಂಛನ। ಅಮೋಘವರ್ಷ ನೃಪತುಂಗ ಕವಿರಾಜ ಮಾರ್ಗದಲ್ಲಿ ಜೀವನ | ಗಂಗ ಕದಂಬ ರಾಷ್ಟ್ರಕೂಟರ ಪಡೆದ ನಾವೆ ಪಾವನ॥೧॥ ಕನ್ನಡವು ವಿಶ್ವ ಲಿಪಿಗಳ ರಾಣಿ ಎಂದರು ವಿನೋಭಾ ಭಾವೆ। ಕಾವೇರಿಯಿಂದ ಗೋದಾವರಿವರೆಗೂ ನೆಲೆಸಿದವರು ನಾವೆ | ಕನ್ನಡ ನಾಡು ನುಡಿಯ ಝೇಂಕಾರದ ಕಹಳೆ ಮೊಳಗಿದವು | ಕನ್ನಡ ಭುವನೇಶ್ವರಿಗೆ ಜಯದ ಮಾಲೆ ಹಾಕಿದೇವು ||೨|| ಜಯ ಜಯ ಕನ್ನಡ ಕವಿಗಳ ಮಾತೆ ಭುವನೇಶ್ವರಿ। ಜಯ ನೀಡು ಜಗದ ಜನತೆಗೆ ನಮೋ ಜಗದೀಶ್ವರಿ। ಜುಳು ಜುಳು ಹರಿಯುವ ಕೃಷ್ಣ ತುಂಗೆ ಕಾವೇರಿ | ಪುಟ್ಟ ರಸಿಕ ಕವಿಗೆ ವರವ ಕೊಟ್ಟ ಪುಟ್ಟ ರಾಜೇಶ್ವರಿ ॥೩॥

----------------------------------

ನೋಂದಣಿ ಐಡಿ : KPFS2-2202

1
Votes
126
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top