Submission 7200

ಸೃಷ್ಟಿಗೆ ನೀ ಶಾಶ್ವತವೇನು?

ರಚನೆ : ಡಾ. ಕೊಟ್ರೇಶ್ ಹಿರೇಮಠ್ ಆರ್

----------------------------------

ಹೇಳುವೆನೆಂದರೆ ಕೇಳುವುದಿಲ್ಲ ಕೇಳದೆ ಹೋದರೆ ತರವಲ್ಲ, ಸೃಷ್ಟಿಯ ನಿಯಮಕೆ ನೀ ಹೊರತಲ್ಲ ಇದನರಿಯದೆ ನಡೆವುದು ಸರಿಯಲ್ಲ ಸೃಷ್ಟಿಯ ಮಡಿಲಲ್ಲಿ ನಿನ್ನಯ ಜೀವ ಅಧಿಪತಿ ನೀನೆ ಎಂದನೆ ದೇವ? ನಿನ್ನಯ ಹೃನ್ಮನ ತಿಳಿಯದೆ‌ ಭಾವ ಕಾಣದೆ ಹೋಯಿತೆ ಸೃಷ್ಟಿಯ ನೋವ ಭುವಿಯೊಳು ನೀನು ಶಾಶ್ವತವೇನು ಸೃಷ್ಟಿಗೆ ನಿನ್ನಯ ಅವಸರವೇನು? ತಾತ್ಕಾಲಿಕ ನೀನು ಮಾಡುದುದೇನು ವಿವೇಕವ ಮರೆತರೆ ನೀ ಮಾನವನೇನು ನಿತ್ಯವು ನಡೆದಿದೆ ಸೃಷ್ಟಿಯ ಅವಮಾನ ಅರಿವಿನ ಸೃಷ್ಟಿಯು ನಿತ್ಯವು ನೀಡಿದೆ ವರದಾನ ಮರುಳ ಚಿತ್ತವೆ ನಿನ್ನಲೇಕೀ ಮೂಢತನ ಸೃಷ್ಠಿಯ ಆರಾಧಿಸುತಲಿರು ಕವಿನಂದನ

----------------------------------

ನೋಂದಣಿ ಐಡಿ : KPFS2-2205

0
Votes
82
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top