Submission 7184

ಬಡವನ ಗೋಳು

ರಚನೆ : ರಮೇಶ

----------------------------------

ಏನಾಗಿದೆ? ಯಾಕಾಗಿದೆ ?ಬಡಜನರ ಬಾಳು ಯಾಕೆ ಗೋಳಾಗಿದೆ? ಮನಸುಗಳ ನಡುವೆ ದೊಡ್ಡ ಗೋಡೆ ನಿಂತಿದೆ. ಮದ್ಯದ ಅಮಲಿಗೆ ಜನರ ಸರದಿ ಸಾಲು ಮುಗಿಯದಾಗಿದೆ. ಬಡತನದ ಕೂಪದಲ್ಲಿ ಬೆಂದುಕೃಷವಾಗಿದೆ. ಮುಗ್ಧ ಮನಸ್ಸು ಕನಸು ಕಂಡು ಸುಮ್ಮನಾಗಿದೆ. ನನಸು ಆಗದಿರಲು ದಿನವು ಅಳಲು ತೋಡಿದೆ. ದೇವನಿತ್ತ ಬಾಳು ಏಕೆ ಬೇಕು? ಉತ್ತರ ಸಿಗದಾಗಿದೆ. ಬಾಲ್ಯದಲ್ಲಿ ಉಣ್ಣದಿರಲು ಅಮ್ಮನು ಗುಮ್ಮನ ಕರೆದಂತೆ ಉಣ್ಣುತ್ತಿದ್ದೆವು ಭಯದಿ ಗುಮ್ಮನ ನೆನೆದು ಬಡತನದ ಗುಮ್ಮ ಮನೆಯ ಮುತ್ತಿದೆ. ಸುಮ್ಮನಿರುವೆ ಮಾತು ಬರದೇ ಅಮ್ಮನ ಕರೆವೆ. ಶಿಕ್ಷಣ ಖಾಸಗಿಯ ಕೈಗೆ ಸಿಕ್ಕಿದುಬಾರಿಯಾಗಿದೆ. ಬಡವನಿಗೊಂದು, ಶ್ರೀಮಂತನಿಗೊಂದು ಶಾಲೆ ಕಟ್ಟಲಾಗಿದೆ. ಮರದ ನೆರಳು ಹೋಗಿದೆ, ತಂಪು ಎ.ಸಿ ಬಂದಿದೆ. ದೊಡ್ಡ ಹುದ್ದೆ ಮಾರಾಟವಾಗಿದೆ. ಬಡವನಿಗೆ ಉದ್ಯೋಗ ಸಿಗದಾಗಿದೆ.

----------------------------------

ನೋಂದಣಿ ಐಡಿ : KPFS2-2195

0
Votes
93
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top