ಒಲವ ಹೆಸರಿವನು
ರಚನೆ : ಯೋಗಿತಾ ಗಜಾನನ
----------------------------------
ಉಸಿರಲ್ಲೇ ಬೆರೆತಿಹ ಒಲವಿನ ಹೆಸರಿವನು ಹಸಿರಾದ ಸ್ನೇಹಕೆ ಹೊಸ ತಿರುವು ತಂದವನು ಪ್ರೀತಿಯ ಪುಟದಲ್ಲಿ ಮುನ್ನುಡಿಯ ಬರೆದವನು ಬಾಳಿನ ಹಡಗಿನಲಿ ಭರವಸೆಯ ನೌಕೆಯಾದವನು ಸಾಗರದಾಳದಿ ದೊರೆತ ನನ್ನೊಲವ ಮುತ್ತಿವನು ಇನ್ನೂ ಬೇಕೆನಿಸುವ ಹಿತವಾದ ಮತ್ತಿವನು ಮೀಸೆಯ ಮರೆಯಲಿ ನಗು ಬೀರುವ ಸೊಗಸಿವನು ಹೊಸತಾದ ಹಾದಿಯಲಿ ಬಣ್ಣದ ಚಿತ್ತಾರವಿವನು ಹಾರಾಡುವ ನನ್ನ ಕನಸಿಗೆ ರೆಕ್ಕೆ ಕಟ್ಟಿಹನಿವನು ಸನಿಹದ ಪ್ರತಿ ಕ್ಷಣವೂ ಸಂಭ್ರಮದ ಸಖನಿವನು ಸಾವಿರದ ಭುವಿಯಲಿ ಸವಿವರದ ನೆನಪಿವನು ಚಿನ್ನದಂತ ಮನದ ಚೆಲುವ ಚೆನ್ನಿಗನಿವನು ದಣಿದ ಬದುಕಿಗೆ ಧನಿಯಾದವ ನನ್ನವನು ನನ್ನರಸಿ ಬಂದವನು ಒಲವ ಹೆಸರಿವನು
----------------------------------
ನೋಂದಣಿ ಐಡಿ : KPFS2-2181