Submission 7152

ಮುಸ್ಸಂಜೆಯ ಪಯಣ

ರಚನೆ : ರಜನೀಶ್ ಕರೋಹಟ್ಟಿ

----------------------------------

ಸಾಗುತಿದೆ ಪಯಣ... ಹಸಿವಿನ ಹೊಡೆತ ಅಲೆಗಳಿಗೆ ಅಂಜದೆ ತುತ್ತು ಕೂಳನ್ನು ಅರಸಿ ಕಾಣದ ಕಡಲಿಗೆ ಭಾರವಾದ ಮನಸ್ಸಿನಿಂದ ಮಳೆ - ಗಾಳಿ -ಚಳಿಗೆ ಅಳುಕದೆ... ತುತ್ತಿನ ಚೀಲ ಬರಿದಾಗುವ ಮುನ್ನ ದಡ ಸೇರುವ ದಾವಂತದಿ ಸಾಗುತಿದೆ ಪಯಣ.... ಸಾಗುತಿದೆ ಪಯಣ.... ಕರೆಯುತಿಹ ಕಡಲ ತೀರಕೆ ಕನಸುಗಳ ಹೊತ್ತು ಜೊತೆ ಜೊತೆಗೆ.. ಬಾನಂಗಳಕ್ಕೆ ಹಾರುತಿದೆ ಮನ ಹಕ್ಕಿಯಂತೆ ... ಹೊಸ ದಾರಿಯ ಹುಡುಕುತ ದಿಗಂತದಾಚೆಗೆ ನೇಸರ ಜಾರಿ ಹೋಗುವ ಮುನ್ನ... ದಡ ಸೇರುವ ತವಕದಲಿ ಸಾಗುತಿದೆ ಪಯಣ...

----------------------------------

ನೋಂದಣಿ ಐಡಿ : KPFS2-2171

13
Votes
189
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top