Submission 7110

ಶಪಥ

ರಚನೆ : ಬಸವರಾಜ್ ಜಿ

----------------------------------

ಇಲ್ಲಿ ಯಾವುದೂ ಅಲ್ಲ ಶಾಶ್ವತ ! ಅದರೂ ಎಲ್ಲವೂ ನನ್ನದು! ನನ್ನದೆನ್ನುವ ತುಡಿತ ಪ್ರೀತಿ, ವಿಶ್ವಾಸ, ಮಮಕಾರ, ಸಹಕಾರಿ ಗುಣಕ್ಕೆ ಕಡಿತ ಇದ್ದುದನ್ನು ಬಿಟ್ಟು, ಇಲ್ಲದ್ದನ್ನು ಪಡೆಯುವ ಮಿಡಿತ ಮೊದಲಿನಂತಿಲ್ಲ ; ಈಗ ನಮ್ಮಗಳದು ಚಿಕ್ಕ ಕುಟುಂಬ ಆದರೂ ಎಲ್ಲರ ನೆಮ್ಮದಿಗೆ ನಿತ್ಯ ಭಂಗ ಸಲ್ಲದವರ ಸಂಗ; ಅರಿಯಲು ಕಷ್ಟ ; ಅಂತರಂಗ ದೈನಂದಿನ ಬದುಕಾಗಿದೆ ರಣರಂಗ ಬುದ್ಧ ಹೇಳಿದ್ದು, ಆಸೆಯೇ ದುಃಖಕ್ಕೆ ಮೂಲ ಎಲ್ಲವನ್ನು ನೀಡಿದೆ ಕ್ರೆಡಿಟ್ ಕಾರ್ಡಿನ ಸಾಲ ಕಂತಿನ ದಿನ ಬಂದಾಗ ಹೆಚ್ಚತ್ತೆ ಹೃದಯ ಬಡಿತ! ಏಕೆ ಬೇಕು? ಎಲ್ಲದೂ ಬೇಕೆನ್ನುವ ತುಡಿತ! ಎಲ್ಲಿದೆ? ಗಾಂಧಿಯ ಸರಳತೆಯ ಮಂತ್ರ ! ಈಗ ಎಲ್ಲವೂ ಅತಂತ್ರ ಬುದ್ಧ ಗಾಂಧಿ ಬಸವಣ್ಣನವರ ತತ್ವಗಳೇ ನಮ್ಮ ಬದುಕಿಗೆ ಪಥ. ಅನುಕರಣೆಗೆ ಮಾಡಬೇಕಿದೆ ನಾವೆಲ್ಲರೂ ಶಪಥ.

----------------------------------

ನೋಂದಣಿ ಐಡಿ : KPFS2-2140

0
Votes
85
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top