ನನ್ನಮ್ಮ
ರಚನೆ : ಡಾ. ರಕ್ಷಾ ಕೆ ಟಿ
----------------------------------
ಮಾತುಗಳ ಮೌನ ಶಬ್ಧವು ನಿನ್ನ ವರ್ಣಿಸಲು ಅಂಗನೆ ಬರವಣದಲ್ಲಿ ವ್ಯಾಖ್ಯಾನ ಕಷ್ಟ ಸಾಧ್ಯ ನಿನ್ನ ಮಮತೆ ರಚನೆ ಪುಣ್ಯಕೋಟಿಯ ಕಥೆಯ ನಿದರ್ಶನ ಒಂದು ಕವನ ಯಾತ್ರೆ ನಿನ್ನ ಕರಳು ಬಂಧದ ಪ್ರೀತಿ ಚರಿತೆ ನಿತ್ಯ ಯಾತ್ರೆ ನವಮಾಸದಿ ನಿನ್ನ ಗರ್ಭದಿ ಇರಿಸಿ ಕಾಪಾಡಿದೆ ಸತ್ತು ಮತ್ತೆ ಜನಿಸಿ ನನ್ನ ಇಳೆಗೆ ಪಾದಾರ್ಪಿಸಿದೆ ಹೇಳದೆ ಕೇಳದೆ ಅರಿಯುವೆ ನನ್ನ ಮನದ ಕನಲು ಉಪಾಸನೆ ಬೇಡ ನಿನ್ನ ಜೊತೆಗಿನ ಮಾತೆ ಧೈರ್ಯದ ನನ್ನ ಕಾವಲು ನಿನ್ನನ್ನು ನೀನೆ ಮರೆತು ಮಗಳ ಪುಟ್ಟ ಗೆಲುವ ಮೆರೆಸಿದೆ ಕಂಡ ಕನಸನ್ನು ಜೋಪಾನಮಾಡಿ ಶ್ರಮಿಸಿಗಳಿಸು ಎಂದೆ ಸುಖ- ದುಃಖದಲ್ಲಿ ನೋವು-ನಲಿವಿನಲ್ಲಿ ಸರಿಸಮ ಜೊತೆನಿಂತೆ ದೇವರಲ್ಲಿ ಪಠಿಸುವೆ ನಾ ಸದಾ ಇರಲಿ ನನ್ನಮ್ಮನ ಒಲುಮೆ ಒರತೆ ನನ್ನಮ್ಮ ನಿನ್ನ ಶ್ರೀರಕ್ಷೆ ಪಡೆದ ಮಗಳಾಗಿ ನಾನು ನಿತ್ಯ ಅಮೃತ
----------------------------------
ನೋಂದಣಿ ಐಡಿ : KPFS2-2128