Submission 7022

ಸ್ನೇಹ ಸಂಗಮ

ರಚನೆ : ಗೌರಪುರ ಮಂಜುನಾಥಸ್ವಾಮಿ

----------------------------------

ನಾನು ನೀನು ಜೋಡಿ ನಮ್ಮಯ ಬದುಕು ಬೀಡಾಡಿ ಬೀದಿಯೇ ನಮ್ಮ ಚಾವಡಿ ನಮ್ಮಯ ಬದುಕಿಗೆ ಕರ್ಮದ ಬೇಡಿ ನಮಗಿಲ್ಲ ಎಂದೂ ಮೃಷ್ಟಾನ್ನ ತಂಗುಳೇ ನಮಗೆ ಪರಮಾನ್ನ ಹಂಚಿ ತಿನ್ನೋಣ ಕೊಟ್ಟಿದ್ದನ್ನ ದೃಢವಾಗಿಸೋಣ ನಮ್ಮ ಗೆಳೆತನವನ್ನ ಬದುಕಿಗಾಗಿ ನಮ್ಮ ಸಂಗ್ರಾಮ ಮುರಿಯದಿರಲಿ ಈ ಸ್ನೇಹ ಸಂಗಮ ಬದುಕಲಿರಬೇಕು ಸದಾ ಸಂಯಮ ಆಗುವುದು ಬೀದಿ ಬದುಕು ಸುಗಮ ನಾ ಬುದ್ಧಿಜೀವಿ ನೀ ಮೂಕಜೀವಿ ಬೀದಿಯಲಿ ನಾವಿಬ್ಬರೂ ಭಾವಜೀವಿ ವಿಧಿಯ ಕೈಲಿ ನಮ್ಮ ಚಾವಿ

----------------------------------

ನೋಂದಣಿ ಐಡಿ : KPFS2-2056

0
Votes
98
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top