Submission 6952

ಸಾವೆಂಬ ಸುಂದರಿ

ರಚನೆ : ಸುಮಾ ಎಸ್ ಮಳೆಮಠ

----------------------------------

ಈಕೆ ಸ್ಥಿಗ್ಧ ಸುಂದರಿ ಜೀವ ಜನ್ಮದಿ ಹಿಂಬಾಲಿಸುವ ಸಮಯದ ಸಂಚಾರಿ ಆಕೆ ಸ್ಪರ್ಶಿಸಿದಾಗ ಬವಣೆಗಳ ಶಿಕಾರಿ ಬಯಕೆಗಳ ಬರಿದಾಗಿಸುವ ಮನೋಹರಿ ನೆಮ್ಮದಿಯ ಮಡಿಲಿನ ಸಾಗರಿ ದೂರುಗಳೇ ಇಲ್ಲದ ಸಮಾಧಿಯ ಸ್ವರ ಲಹರಿ ಮೌನದಲಿ ಝೇಂಕರಿಸುತಿರುವ ಓಂಕಾರಿ ಆಕೆ ಲೌಕಿಕ ಜಗದಲಿ ವಿರಮಿಸಿದಾಗ ವಿಕಾರಿ ಅನಂತತೆಯಲಿ ಲೀನವಾಗುವವರೆಗೂ ಕಾಡುತ್ತಲೇ ಇರುವಳು ಈ ಸಾವೆಂಬ ಸುಂದರಿ

----------------------------------

ನೋಂದಣಿ ಐಡಿ : KPFS2-2002

0
Votes
96
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top