Submission 6812

ಬೆತ್ತಲೆ ದೇಹಕ್ಕೆ ಮಣ್ಣೇ ಹೊದಿಕೆ

ರಚನೆ : ಮಿರ್ಲೆ ಚಂದ್ರಶೇಖರ

----------------------------------

ಮರಣವೇ ನಿನ್ನ ಬಯಸದಿದ್ದರು ಬಿಡಲೊಲ್ಲೆ, ನಿನ್ನ ಅಪ್ಪದೆ ಉಳಿದವರಿಲ್ಲ, ನೀ ಅಪ್ಪಿಕೊಂಡಾಗ ಇಟ್ಟ ಹೆಸರನ್ನೂಪ್ಪುವುದಿಲ್ಲ ಯಾರೂ, ಬಾಡಿ ಎನ್ನುವರು!, ದೊಡ್ಡ ಮೊತ್ತದ ಸೂಟುಬೂಟುಗಳನ್ನೂ ಬಿಡುವುದಿಲ್ಲ ಕಿತ್ತೆಸೆದು ಬಿಳಿಬಟ್ಟೆ ಮುಚ್ಚಿ ಅಳುತ್ತಾ ಕಳುಹಿಸುವರು, ಜೀವ ಇಲ್ಲ, ಆತ್ಮ ಒಳಗಿಲ್ಲ, ಇಲ್ಲ.. ಇಲ್ಲ.. ಏನೂ ಇಲ್ಲ ನಿಶ್ಚಿಂತೆಯಿಂದ ಮಲಗಿದ ಬೆತ್ತಲೇ ದೇಹಕ್ಕೆ ಮಣ್ಣೇ ಹೊದಿಕೆ!, ಮರಣವೆಂಬುದು ಕಠೋರವಲ್ಲ, ಕ್ರೂರಿಯಲ್ಲ, ನೋಯಿಸದು ಬೇಂದ್ರೆ ಹೇಳ್ದಂಗೆ ನಾವು ಇರುವವರೆಗೂ ಬರದು ಮರಣ, ಮರಣ ಬಂದಾಗ ಇರುವುದಿಲ್ಲ ಯಾರೂ.. ಮತ್ತೇಕೆ ಚಿಂತೆ!, ಸತ್ತವರ ಮುಂದೆ ಗುಣಗಾನ ಮಾಡುತ್ತಾ ಗೋಳಿಡುವರು ಜೊತೆಗೆ ಹೋದವರುಂಟೆ?, ಆತ್ಮ ತೊರೆದ ನಿರ್ಜಿವ ದೇಹಕೆ ಯಾವ ಬಂಧನವೂ ಇಲ್ಲದೆ, ಎಂದೆಂದೂ.. ಎದ್ದೇಳದಂತೆ, ದೇವರಾಗಿ ಪೂಜಿಸಿಕೊಂಡು ಮಲಗಿದೆ ಸಮಾಧಿಯೊಳಗೆ!.

----------------------------------

ನೋಂದಣಿ ಐಡಿ : KPFS2-9897

2
Votes
86
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top