Submission 6810

ನನ್ನವರು

ರಚನೆ : ಸುವರ್ಣ ಕುಂಬಾರ್

----------------------------------

ನಿನ್ನ ನಯನಗಳಲ್ಲಿ ಹೊಮ್ಮುತ್ತಿತು ಸಾವಿರ ಸಾವಿರಾರು ಮೌನಗಳ ಮಾತು ಮನ ಮೀಟುತ್ತಾ ಕವಿತೆ ಬರೆಯುತ್ತಿತು ಭಾವಗಂಗೆಯಲ್ಲಿ ಆನಂದಿಂದ ತೇಲುತ್ತಿತು ಉಸಿರಿನ ಲಯದಲ್ಲಿ ಹೊಳೆಯುತ್ತಿತು ನನ್ನಂತರಂಗದಲ್ಲಿ ಸಂಭ್ರಮದಿಂದ ಮಿನುಗುತ್ತಿತು ಒಳಧ್ವನಿಯಾಗಿ ಉಸಿರಬೆರೆತು ಹಾಡುತ್ತಿತು ಹೇಳದೆ ಉಳಿದ ಮಾತುಗಳಾಡುತ್ತಿತು ಅರಿತು ನಲ್ಮೆಯ ನದಿಯಾಗಿ ಹರಿಯುತ್ತಿತು ಬಿಸಿ ಉಸಿರಿನ ಪದಪಲ್ಲವಿಯ ಹೇಳುತ್ತಿತು ಸನಿಹದ ಧ್ಯಾನದಲ್ಲಿ ದೈವವೇ ಆಗಿತು ಆತ್ಮಬಂಧುವೇ ಸಂಧಿಸಿದೆ ಅನುರಾಗವಾಗಿ ಈ ಜನ್ಮದ ಸೊಗಸಾದ ಹೂಬನವಾಗಿ ನೋವು ನಲಿವಿನ ಸಂಗಾತಿ ಸಹಚಾರಿಯಾಗಿ ನೀ ನನ್ನಲ್ಲಿಯೇ ಅಡಗಿದ ಚೈತನ್ಯವಾಗಿ

----------------------------------

ನೋಂದಣಿ ಐಡಿ : KPFS2-9895

0
Votes
87
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top