Submission 6802

ಅವಳಿಲ್ಲದೆ...

ರಚನೆ : ಸಿದ್ದಲಿಂಗೇಶ್ವರ ಮಾದೆ

----------------------------------

ಕಾದು! ಕಾದು! ಸೋತೋದೆ ನೀ ಬರುವದು ಹುಸಿಯಂದು ತಿಳಿದಾಗ ಕಣ್ಣಿಂದ ಜಾರುತಿದೆ ಕಂಬನಿ ಚಿಲುಮೆಯಾಗೆ, ನನ್ನೂರ ಸರಹದ್ದಿಗೂ ದಾಟಿ! ಎಲ್ಲೇ! ಮೀರಿ ನಿಂತಿತ್ತು ನಿನ್ನಯ ನಲ್ಮೆ, ಹೇಳದೆ ಹೊಂಟೋದೆ ಕಾರಣವ ಹೇಳದೆ. ಅರೆಹುಚ್ಚನಾದೆ! ನಿನ್ನಯ ಗುಂಗಿನಲ್ಲಿ ಗುಂಡಿಗೆ ಝಲ್! ಎನ್ನುತ್ತಿದೆ ನಿನ್ನ ನೆನಪು ತಾಗಿ ಎಚ್ಚರವಾದಾಗ ಬಡಿತ ಜೋರಾಗಿ ಅಳುತ್ತಿರುವೆ ಬಿಕ್ಕಿ ಬಿಕ್ಕಿ. ಮೂಕನಾಗಿರುವೆ ನೀನಿಲ್ಲದ ಈ ಘಳಿಗೆ! ಅವಳಿಲ್ಲದೆ ನೀಲಾಕಾಶದ ಕಡೆ ನನ್ನ ಚಿತ್ತವಾಲಿರುವಾಗ ಇನ್ನೇಕೆ ಬೇಡಲಿ ದೇವಾ! ನೀನೇ ಮೌನಿಯಾದಾಗ.

----------------------------------

ನೋಂದಣಿ ಐಡಿ : KPFS2-9890

2
Votes
80
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top