Submission 6804

ತೃಪ್ತ ಮನ

ರಚನೆ : ವಿಶ್ವನಾಥ್ ಶಿವಸ್ವಾಮಿ

----------------------------------

ಹೊಟ್ಟೆ ತುಂಬಿದವರ್ಯಾರು? ಹುಟ್ಟಿದಾಗಿಂದ ಬೇಕು ಬೇಕೆನುತ ಒಟ್ಟುಗೂಡುವವರೇ?... ಅಥವಾ ದಿಟ್ಟಮನಸಿನಲಿ ಇಷ್ಟೇ ಸಾಕೆನುತ ಗಟ್ಟಿ ಕೂತ ಅವರೇ?... ಇಟ್ಟ ಭಕ್ಷ್ಯಗಳ ತಿಂದು ತೇಗಿದರೂ ಕಷ್ಟ ಎನ್ನುವವರೇ?... ಅಥವಾ ತೊಟ್ಟು ಗಂಜಿಯಲು ಸ್ವರ್ಗವಿಹುದೆಂದು ಸ್ಪಷ್ಟ ಕಾಣುವವರೇ?... ಗುಟ್ಟುಗುಟ್ಟಲ್ಲೇ ಮಹಲು ಮಹಲುಗಳ ಕಟ್ಟಿ ತೋರುವವರೇ?... ಅಥವಾ ನೆಟ್ಟ ನಾಲ್ಕಾರು ಕಡ್ಡಿ ಸೂರೆನುತ ತಟ್ಟಿ ಮಲಗುವವರೇ?... ಇಲ್ಲಿ, ಹೊಟ್ಟೆ ತುಂಬಿದವರ್ಯಾರು?...

----------------------------------

ನೋಂದಣಿ ಐಡಿ : KPFS2-9891

0
Votes
85
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top