Submission 6712

ಅಪ್ಪ ಎಂಬ ಅನಾಮಿಕ

ರಚನೆ : ಡಾ. ನೀ. ಗೂ ರಮೇಶ್

----------------------------------

ಬಾಹುಬಲಿಯಂಥ ಅಪ್ಪನ ಹೆಗಲು ನೊಗವಿಲ್ಲದೆ ಸವೆದಿದ್ದು ನಂಬಿದವರ ಹೊಟ್ಟೆಬಟ್ಟೆಗಷ್ಟೇ. ಎಂದೂ ಜಾರಿ ಬೀಳದ ಅಪ್ಪನ ಕಣ್ಣ ಹನಿಗಳು ಕುಸಿಯುವ ಮನೆಗೆ ಇಟ್ಟಿಗೆಯಾಗಿದ್ದು ಲೋಕದ ಕಣ್ಣಿಗೆ ಹೊಣೆಗಾರಿಕೆಯಷ್ಟೇ. ಸಂಬಂಧಗಳ ಸಡಗರದಲ್ಲಿ ಅಪ್ಪ ಅನಾಮಿಕ ಆಗುಹೋಗುಗಳಿಗೆಲ್ಲ ಹೆಸರೊಂದೇ ಅಪ್ಪ ಎಂಬ ಮೂಕ ನಾವಿಕ! ಬೆಳೆದ ಮಕ್ಕಳಿಗೆ ಅಪ್ಪ ಎಂದರೆ ಹಣ ಬಿಚ್ಚದ ರಾಕ್ಷಸ! ಮೆಟ್ಟಿಲು, ಮಹಡಿ ಏರುವುದು ಕಲಿತ ಮಕ್ಕಳಿಗೆ ಅಪ್ಪನ ಹೆಗಲು ಕುಬ್ಜ, ಮಾತು ಅಪಥ್ಯ! ಕೊನೆಗೂ ಅಪ್ಪ ಕೇವಲ ಹಣ ಕೊಟ್ಟ ಯಂತ್ರ ಅರ್ಥವಾಗುವುದೇ ಇಲ್ಲ ಅರೆಹೊಟ್ಟೆಯಲಿ ಬೆವರು ನುಂಗಿದ ಪಾತ್ರ!

----------------------------------

ನೋಂದಣಿ ಐಡಿ : KPFS2-9818

0
Votes
88
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top