Submission 6622

ಗೆಳತಿಯ ಅಗಲಿಕೆ

ರಚನೆ : ಸುವರ್ಣ. ಆರ್

----------------------------------

ತಿಳುವಳಿಕೆ ಇಲ್ಲದ ವಯಸ್ಸಿನಲ್ಲಿ ಗೆಳತಿಯಾಗಿ ಸಿಕ್ಕವಳು , ಆ "ಬಂಧದ" ಹೆಸರು "ಸ್ನೇಹ " ಎಂದು ತಿಳಿಯುವಷ್ಟರಲ್ಲಿ, ವಿಧಿಯ ಕೈವಶವಾದವಳು. ಕನಸು ತುಂಬಿದ್ದ ಕಣ್ಣಿಗೇನು ಗೊತ್ತಿತ್ತು, ಇದು ತನ್ನ ಕೊನೆಯ ಕನಸೆಂದು, ಮುದುಡಿ ಮಲಗಿದ್ದ ದೇಹಕ್ಕೇನು ಗೊತ್ತಿತ್ತು, ಇದು ತನ್ನ ಕೊನೆಯ ವಿಶ್ರಾಂತಿಯೆಂದು, ಈಗ ತಾನೇ ದುಡಿದು ದಣಿದು ಬಂದ ಜೀವಕ್ಕೇನು ಗೊತ್ತಿತ್ತು, ಇದು ತನ್ನ ಕೂಸಿನ ಕೊನೆಯ ಯಾತ್ರೆ ಎಂದು! ಎಷ್ಟು ಮಾತನಾಡಿದರು ಮಾತನಾಡದೆ, ಆ ದಿನ ಮೌನಿಯಾಗಿಯೇ ಉಳಿದುಬಿಟ್ಟಳು...!

----------------------------------

ನೋಂದಣಿ ಐಡಿ : KPFS2-9738

0
Votes
74
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top