ತಾಯಿ
ರಚನೆ : ರುದ್ರೇಶಚಾರ್ ಎಸ್
----------------------------------
ಮಮತೆಯ ಮಡಿಲಲಿ ತಾಯಿ, ಮಧುರ ನಾದದಲಿ ತಾಯಿ ಸಂಕಟ ಬಂದಾಗ ನೆರಳು, ಸಂತಸದಲಿ ಅವಳು ಬೆಳಕು ಅನ್ನದ ಸುವಾಸನೆ ತಾಯಿ, ಅರಿವಿನ ದೀಪವಾಗಿ ತಾಯಿ ತ್ಯಾಗದ ತೊಡರಲಿ ತಾಯಿ, ದಯೆಯ ಸಾಗರವು ತಾಯಿ ಬಾಲ್ಯದ ಹೆಜ್ಜೆಗೆ ದಾರಿ, ಬಾಳಿನ ಪಥದಲಿ ಸಾರಿ ಗುರುವಾಗಿರುವ ತಾಯಿ, ಗಗನದ ಬೆಳಕಾಗಿ ತಾಯಿ
----------------------------------
ನೋಂದಣಿ ಐಡಿ : KPFS2-9742