Submission 6496

ಭಾಷಾಭಿಮಾನ

ರಚನೆ : ಗೀತಾ ಶಿರೋಳಕರ್

----------------------------------

ಕನ್ನಡಮ್ಮನ ಹೊನ್ನುಡಿಯ ಕುಡಿಗಳೇ ಆಲಿಸಿರಮ್ಮನ ನೋವಿನ ನುಡಿಗಳ ಉಳಿವಿಗೆ ಮೊರೆಯಿಟ್ಟು ಉಮ್ಮಳಿಸಿಹಳು ಯೋಧರಾಗಲು ಕರೆ ನೀಡಿಹಳು ಆಲೂರರು ಕರ್ನಾಟಕ ರೂವಾರಿಗಳು ಅವರಿಗೆ ನಾವು ಆಭಾರಿಗಳು ಏಕೀಕರಣ ಚಳುವಳಿ ಮಾಡಿಹರು ನಮಗೂ ಬಳುವಳಿ ನೀಡಿಹರು ಹುಟ್ಟಡಗಿಸೋಣ ಪರ ಭಾಷಾ ಹುನ್ನಾರ ಎದೆತಟ್ಟಿ ಬಳಸೋಣ ಅಚ್ಚಗನ್ನಡ ಇನ್ನಾರ ಅಲ್ಪವೆಂದ ಮೂಢರಿಗೂ ತಿಳಿಸಿ ನೋಡೋಣ ಅರಿತಾರು,ಬೆರೆತಾರು,ನುಡಿದಾರು ನಾಡಸೊಗಡ ಷಟ್ಪದಿ,ತ್ರಿಪದಿ,ಕಾವ್ಯ, ಹವ್ಯಕ,ಮುಕ್ತಕ,ರಗಳೆ ಛಂದಸ್ಸು,ಲಘು-ಗುರು ಕನ್ನಡ ಭಾಷಾಗುರುವೆ ಅರಿಯೆ ಸಾಗರ,ನುರಿಯೆ ಸೋಜುಗ,ನಮ್ಮದೀ ನೊಗ ಕವಿ ಪುಂಗರು ತೇಯ್ದ ಗಂಧದ ಕಂಪು ಈ ಜಗ

----------------------------------

ನೋಂದಣಿ ಐಡಿ : KPFS2-9644

0
Votes
81
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top