Submission 6464

ಸೃಷ್ಟಿ ಸೊಬಗು

ರಚನೆ : ಸತ್ಯಲತಾ ಸಿದ್ಧಮೂಲೆ

----------------------------------

ದಿನಕರನು ಉದಯಿಸಲು ತಮಕಳೆದು ಬೆಳಗಾಗೆ ಹಕ್ಕಿಗಳು ಹಾಡುವುವು ಹೊಸ ಹುರುಪಿನಿಂದ ಗೀತೆಯಿಂಚರದ ಸಿಂಚನವು ಕಿವಿಗಿಂಪು ಮನಕೆ ಮುದ ಸತ್ಸಂಗ ಸುಮದ ಕಂಪು ವಸುಮತಿಯ ಕಡೆಗೆನ್ನ ಕಿರಣಗಳ ತೋಳ್ಚಾಚಿ ತುಸು ತುಸುವೆ ಮೊಗವನ್ನು ತೋರುತಿಹನು ದಿನಮಣಿಯ ನೋಟಕ್ಕೆ ಬಣ್ಣ ಬಣ್ಣದಿ ಬಿರಿದು ವಸುಧೆ ಕುಸುಮವು ನಾಚಿ ನಸುನಗುತಲಿಹಳು ಭಾನುಭುವಿ ದಿನ ಭೇಟಿ ಶಕ್ತಿಚೇತನ ವೃಷ್ಟಿ ಹೊಚ್ಚ ಹೊಸತನ ಸೃಷ್ಟಿ ಅನುಗಾಲವೂ ಸೌಹಾರ್ದ ಸಮರಸದ ಬಂಧವೀ ಅನುಬಂಧ ಚಿರಕಾಲ ಬೆಳಗುತಿಹ ಸ್ನೇಹಸಮ್ಮಿಲನವೂ.

----------------------------------

ನೋಂದಣಿ ಐಡಿ : KPFS2-9622

0
Votes
85
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top