Submission 6462

ಮುಗುಳ್ನಗಯೊಳಗಿನ ಮೌನ ಮನ

ರಚನೆ : ಭಾಗ್ಯಲಕ್ಷ್ಮಿ

----------------------------------

ಅರಳುವ ಹೂವಿಗೆ ತಿಳಿಯದು ತಾನು ಎಲ್ಲಿಗೆ ಸೇರುವಿನೆಂದು.... ಹೆಣ್ಣಿನ ಮುಡಿಗೋ, ದೇವರ ಪಾದದಡಿಗೊ, ಶವದ ಹೆಗಲಿಗೋ....! ಆದರೂ ನಗುವುದು ಭವಿಷ್ಯ ಮರೆತು, ಪ್ರಸ್ತುತತೆಯ ಅರಿತು....! ಮುಗ್ಧವಾಗಿ ಮೊಗ್ಗು ಬಿಚ್ಚಿಟ್ಟು ಹೂವಾಗಿ ನಲಿವುದು, ಹೊಸತನವ ಹೊತ್ತು ಮೆರೆವುದು..... ಪರರ ಕೈಗೆ ಸಿಲುಕಿ ತನ್ನ ಆಸೆ ಮುಚ್ಚಿಟ್ಟು, ಗಿಡ ತೊರೆದು ಇನ್ನೆಲ್ಲೋ ಸೇರಿ ಅಳುವುದು ಆದರೂ ತನ್ನ ನೋವ ಬಚ್ಚಿಟ್ಟು ಸದಾ ನಗುವುದು!... ಅಳುತಿದೆ ಹೂವು, ಯಾರಿಗೂ ತಿಳಿಯದೆ.... ತನ್ನ ನೋವ ಯಾರಿಗೂ ಹೇಳದೆ.... ಹೊತ್ತು ಮೊಗದ ಮೇಲೊಂದು ಮುಗುಳ್ನಗೆಯ, ಜೊತೆಗೊಂದಿನಿತು ಮುಗ್ಧತೆಯ...

----------------------------------

ನೋಂದಣಿ ಐಡಿ : KPFS2-9620

0
Votes
74
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top