Submission 6372

ಸಪ್ತ ಸಾಗರದಾಚೆ ಎಲ್ಲೋ

ರಚನೆ : ಲಿಖಿತ್ ಆರ್ ಎಸ್

----------------------------------

ಅರ್ಹತೆಗೂ ಮೀರಿ ಭಾಗ್ಯವು ಬಾಗಿಲು ತೆರೆದಾಗ ಸಿರಿವಂತಿಕೆಯ ಗುಂಗಲ್ಲಿ ಆದರ್ಶಗಳು ಮರೆತಾಗ ಅತಿಥಿಯಾಗಿ ಬಂದವನು ಅರಸನಾಗಲು ಯತ್ನಿಸುವಾಗ ಎಚ್ಚರವಿರಲಿ ! ತ್ಯಜಿಸಲಾಗುವುದು ಎಲ್ಲಾ ವೈಭೋಗ ! ಸಪ್ತ ಸಾಗರದಾಚೆ ಎಲ್ಲೋ ಇರುವುದೊಂದು ಸುಪ್ತ ಲೋಕ ಕರ್ಮಾನುಸಾರವಾಗಿ ಬಡಿಸಲಾಗುವುದು ವಿಶೇಷ ನಳಪಾಕ ಕಾಲದ ಕೈಚಳಕದಡಿ ಸಂಕಟಗಳು ಸಾಗರವಾದಾಗ ಸಾಸಿವೆಯಷ್ಟಿದ್ದ ಸಂಭ್ರಮ- ಅದೃಷ್ಟವೂ ಮರೆಯಾದಾಗ ನಿಸ್ವಾರ್ಥತೆಗೆ ಸೃಷ್ಟಿಯೂ ಸ್ಪಂದಿಸದಿರುವಾಗ ತಾಳ್ಮೆ ಇರಲಿ ! ಬರುವದೊಂದು ಅದ್ಬುತ ಯೋಗ ! ಸಪ್ತ ಸಾಗರದಾಚೆ ಎಲ್ಲೋ ಅಡಗಿದೆ ಒಂದು ಸುಪ್ತ ಜೀವನ ಅಲ್ಲಿ ಧರ್ಮವೇ ತಂದೆ- ಕರ್ಮವೇ ತಾಯಿಯ ಆoಗನ

----------------------------------

ನೋಂದಣಿ ಐಡಿ : KPFS2-9548

0
Votes
81
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top