ಮಾಯೆ
ರಚನೆ : ಕೃಷ್ಣ ಅಲೆವೂರು.
----------------------------------
ಅಯೋಮಯ ! ಲೋಕ ಮಾಯಾ. ಮಹಾ ಆಯಾ ನನ್ನ ಛಾಯಾ. ಅಹಂಮಯ ಈ ಜಗ ಹೃದಯಾ ಕನಲಿ ಬಳಲಿ ತೇಲಿಸುವ ಕನಸೆ ಕುರುಡಾದ ಜೂಟಾಟ, ಕೊರಳು ನೆರಳು ಕಂಪಿಸುವ ಬದುಕೆ ಬೆರಗಾದ ಬಯಲಾಟ. ಕಣ್ಣು ಕಾಣದ ಕಂಡ ಕನಸ ಛಾಯೆ; ಮಾಯೆ-ಛಾಯೆ. ಬೇಕೆಂದರೂ ದೂರಾಗುವ ಭ್ರಮೆ! ಅದಲು ಬದಲು ಪೋಣಿಸಲು ಪದವ ಹುಡುಕೋದೆ ಪರದಾಟ, ಮರಳಿ ಕೆರಳಿ ಪೀಡಿಸುವ ಮನದ ಮೋಹನವೆ ಗೋಳಾಟ. ಈ ನನ್ನಲ್ಲಿಯೂ 'ನಾನಿ'ಲ್ಲದ ಭ್ರಮೆ! ನಂಬಿಕೆಯ ಕಂಪಿಸುವ ಮೋಹಕದ ಛಾಯೆ; ಮಾಯೆ. ಇರುಳ ಒಳಗೆ ಇರುವ ಬೆಳಕ ತುಣುಕ ನಾ ಕಾಣೆ, ನಾ. ಹಗಲು ಇರುಳ ಸೇರಿಸುವ ನಸುಕೆ ಮಾಯಾದ ಮೋಜಾಟ, ಏನಿದ್ದರೂ ಏನಿಲ್ಲದ ಭ್ರಮೆ!
----------------------------------
ನೋಂದಣಿ ಐಡಿ : KPFS2-9515