ಬದುಕಿನ ಅಲೆಗಳು
ರಚನೆ : ಪ್ರಮೋದ್ ಡಿ ಎಸ್
----------------------------------
ಈ ಬದುಕಿನ ಅಲೆಗಳು ಮಿಡಿಯುತಿವೆ, ಏಳುತಾ, ಬೀಳುತಾ, ಕಾಣದ ಕಡಲ ಬಯಸುತಾ, ಸಾಗುತಿವೆ. ಕನಸಿನ ಹಂಬಲ ಎದೆಯಲಿ ಪ್ರತಿಧ್ವನಿಸುತಿದೆ, ಗೆಲುವಿನ ಛಾಯೆಯು ಕ್ಷಣ ನೋಟಕೆ ಮರೆಯಾಗಿದೆ. ಸೋಲದೆ, ಕುಗ್ಗದೆ, ಕಲಿಯುತಾ ಕಹಿ ಪಾಠವ, ಮುನ್ನಡೆಯುತಿವೆ. ಕತ್ತಲು ಭೂಮಿಯ ಎಲ್ಲೆಡೆ ಮುಸುಕಿದೆ, ಅಲೆಗಳು ಕುಣಿಯಲು ಶಶಿಕಾಂತಿಗೆ ಕರೆಮಾಡಿವೆ. ಮೌನವ ಕಾಪಾಡುತ, ಹೊಸ ಬೆಳಕಿನ ಸಮಯಕೆ, ಕಾಯುತಿವೆ.
----------------------------------
ನೋಂದಣಿ ಐಡಿ : KPFS2-9517