Submission 6282

ವಿರಹದ ಮಧುರತೆ

ರಚನೆ : ಗೀತಾ ಲೋಕೇಶ್

----------------------------------

ಪ್ರಶಾಂತ ನಿಶ್ಯಬ್ದ ಸುಂದರ ಅರಮನೆಯಲ್ಲಿ ಸ್ವಚ್ಛ ನೀರಿನ ತಾವರೆ ಕೊಳದ ಬಳಿ ಹಂಸ ಪಕ್ಷಿಯ ಜೊತೆ ಒಡನಾಡುತಲಿ ನಿಂತಿಹಳು ದಮಯಂತಿ ವಿರಹದ ವೇದನೆಯಲಿ ನಳನ ನೆನಪು ಕಾಡಿ ಬೇಸರದ ಭಾವನೆಯಲಿ ಸುಳಿವಿಲ್ಲದ ಪ್ರಿಯತಮನ ದಾರಿ ಕಾಯುತಲಿ ಪ್ರತಿಕ್ಷಣ ಬೇಯುತ ವಿರಹಾಗ್ನಿ ಜ್ವಾಲೆಯಲಿ ಇನಿಯನ ಸುಖ ಸಾಂಗತ್ಯವ ಬಯಸುತಲಿ ಹಂಸವನ್ನು ರಾಯಭಾರಿಯಾಗಿ ನಲ್ಲನ ಬಳಿ ಕಳುಹಿಸಿದಳು ಪ್ರಿಯತಮನಿಗೆ ಪ್ರೇಮ ಸಂದೇಶ ರವಾನಿಸಿದಳು ನಳನ ಸವಿ ನೆನಪಲಿ ಸದಾ ವಿಹರಿಸುತ್ತಿದ್ದಳು ವಿರಹ ಪ್ರೀತಿಯ ದುಪ್ಪಟ್ಟು ಮಾಡುವ ವೇದನೆ ಒಲವಿನ ಮಧುರಾತಿ ಮಧುರ ಯಾತನೆ ಸಂಧಿಸಲು ಹಂಬಲಿಸುವ ಹೃದಯದ ಹಿತರೋಧನ ತಾಳ್ಮೆಯಿಂದ ಕಾಯುವ ಚಡಪಡಿಕೆಯ ತಲ್ಲಣ

----------------------------------

ನೋಂದಣಿ ಐಡಿ : KPFS2-9472

0
Votes
77
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top