Submission 6280

ಅವ-ಲೋಕ-ನ

ರಚನೆ : ಡಾ. ಅನ್ನಪೂರ್ಣ ಎನ್.ಎಸ್

----------------------------------

ಅವ -ತಿಳಿದದ್ದು ತಿಳಿಯಷ್ಟೆ ನೋಡಿ ಲೋಕ – ರೂಢಿ ಕದಡಿದ ರಾಡಿ ನ - ಮಡುಗಟ್ಟಿಹೆ ಬಗೆ ಮುದುಡಿ ಮರುಗುವುದು ಮನ ಮೌನದಲೆ ಎನಿತು ಕೊರಗದ ಕ್ಷಣಗಳಲಿ ಕಣ್ಣು ಹನಿಗರೆದೀತು ಗಟ್ಟಿಯಾದ ನಾನು ಗುಡುಗಲು ಅವ ಮಳೆ ಮಿಂಚಿನೋಟವ ಬಿಗಿದಪ್ಪಿ ಅರೆಸುಟ್ಟ ಇಳೆ. ಒಳಗೊಳಗಿಳಿದಷ್ಟು ಆಳ, ತಪ್ಪೀತು ಹದ ಕಾಲನ ಕರೆ ಕರೆದಷ್ಟು ಮುಚ್ಚೀತು ಕದ ಕುರುಡನ ಕೈ ಹಣತೆ ಬಾಳೆಂಬ ಹದನ ಕಿವುಡನೊಡನೆ ಮೌನ ಅವಲೋಕನ ಅನಿಕೇತನ ಅಂತರಂಗದ ಅನಂತಯಾನ.

----------------------------------

ನೋಂದಣಿ ಐಡಿ : KPFS2-9471

0
Votes
78
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top