Submission 6278

ಬದುಕು

ರಚನೆ : ಭಾಸ್ಕರ ಬಾಸು

----------------------------------

ಭಾವನೆಯ ಭಾವಸಾಗರದಲ್ಲಿ ಭಾವಗಳು ಬಲಿಯಾಗುತ್ತಿದೆ. ಬದುಕಿಗೆ ಬಲವಿದ್ದರೂ ಬದುಕಿನ ಛಲವಿದ್ದರೂ.. ಮನದಾಳದ ಕನಸುಗಳು ಕಗ್ಗತ್ತಲೆಯಲ್ಲಿ ನಲಗುತ್ತಿದೆ. ನನಸಾಗುವ ಯೋಚನೆಯಿದ್ದರೂ ನನಸಾಗುವ ಅವಕಾಶವಿದ್ದರೂ.. ಬದುಕಿನ ಜಂಜಾಟದ ಜವಾಬ್ದಾರಿಯಲಿ ಬದುಕೇ ಮೌನವಾಗುತ್ತಿದೆ. ಮರೆಯಲಾಗದ ನೋವುಗಳಿದ್ದರೂ ಮರೆಮಾಚುವ ಕ್ಷಣವಿದ್ದರೂ.. ಕೊನೆಗೊಮ್ಮೆ.. ಎಲ್ಲಾ ಭಾವಗಳ ಎದುರು ನಿರ್ಭಾವ ನಾನು!

----------------------------------

ನೋಂದಣಿ ಐಡಿ : KPFS2-9469

0
Votes
77
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top