Submission 6236

ಇನಿಯ

ರಚನೆ : ಸೌಭಾಗ್ಯ ಗೌಡರ

----------------------------------

ಕಡುಕಾನನದ ಮಧ್ಯೆ ಹುಟ್ಟಿತೊಂದು ಕವನ ಅದು ಕುರಿತಾಗಿತ್ತು ನನ್ನಿನಿಯನ ದಟ್ಟಡವಿಯ ನಡುವೆ ಒಂದು ಪುಟ್ಟ ಬೆಳಕಿತ್ತು ಅದು ನನ್ನವನ ನಗುವಾಗಿತ್ತು ಕಾನನದ ತುಂಬ ತುಂಬಿತ್ತು ಜೀಜಿಂಬೆಯ ಝೇಂಕಾರ ಅದರ ನಡುವೆ ನನ್ನಿನಿಯನ ಪ್ರೀತಿಯ ಓಂಕಾರ ತಂಪಾದ ಗಾಳಿಗೆ ಸಾಕಾರವಾಗಿತ್ತು ಹಸಿರು ನನ್ನೊಡನೆ ಬೆರತಿತ್ತು ನನ್ನವನ ಉಸಿರು ವನದೇವತೆಯ ಸೌಂದರ್ಯಕ್ಕೆ ಸಾಕ್ಷಿಯಾಗಿತ್ತು ಔದುಂಬರ ಬೇಡವೆನ್ನುವನು ನನ್ನವನು ಪ್ರೀತಿಯಲಿ ಆಡಂಬರ ನಿಸರ್ಗದೇವತೆಯ ಸೌಂದರ್ಯಕ್ಕಿಲ್ಲ ಅಹಂಕಾರ ನನ್ನ ಸೌಂದರ್ಯಕ್ಕೆ ಬೇಡವೆನ್ನುವನು ಅಲಂಕಾರ ವನದೇವತೆಯ ಮಡಿಲಲ್ಲಿದ್ದರೆ ಮನಸಾಗುವುದು ಹಗುರ ನನ್ನವನ ಮನದಲ್ಲಿದೆ ಸಾತ್ವಿಕ ಪ್ರೀತಿಯ ಸಾಗರ

----------------------------------

ನೋಂದಣಿ ಐಡಿ : KPFS2-9426

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top