ಮಕಾರದ ನಕಾರ
ರಚನೆ : ನಿಹಾರಿಕಾ ಹೆಗಡೆ ಸಿ. ಕೆ
----------------------------------
ನವಿಲುಗರಿಗಳ ನಯನದಂತೆ ನನ್ನೆಡೆ ನೋಡುತ್ತಾ ನಿಂತಿರುವೆ ಮನದಲ್ಲಿ ಮುಸುಕಿ ಮಾಯವಾದ ಮೋಹ, ನಿನ್ನ ನಾಲಿಗೆಯಲ್ಲಿ ನಲಿಯುತ್ತಿದೆ ಮುಂದೇನು? ಮಾತನಾಡು, ಮನ ಮಿಡಿಯುತ್ತಿದೆಯಿಲ್ಲಿ... ನಾಚಿಕೆಯು ನೆರಳಿನಂತೆ ನನ್ನಲ್ಲಿ ನೆಲೆಸಿದೆ ಮದವೇರಿದ ಮರೀಚಿಕೆಯಂತೆ, ನಾಡಿಯ ನಡೆ ನಾಟ್ಯವಾಡುತ್ತಿದೆ, ನಿನ್ನ ನೋಟದ ಮರ್ಮವನ್ನರಿಯದೆ. ನಲಿವಿನ ನಾದಕ್ಕೆ ನಭವೇ ಮಿತಿಯಾಗಿ, ಮೈಮರೆತಿರುವೆ. ನಿನ್ನ ನಶ್ವರತೆಯ ನೋಟ ನಿಲ್ಲಿಸು, ಮೌನದ ಮಾಟವನ್ನು ಮಲಗಿಸು. ನನಗೂ ಪದಗಳ ಮಿತಿಯಿಲ್ಲವೇ? ಇನ್ನೆಷ್ಟು ಮಕಾರ ನಕಾರ ಬಳಸಲಿ ನಾನು?
----------------------------------
ನೋಂದಣಿ ಐಡಿ : KPFS2-9427