ಅನ್ಯಗ್ರಹ ಜೀವಿಯ ಕನವರಿಕೆ
ರಚನೆ : ಶ್ವೇತಾ ಎಚ್
----------------------------------
ಸುತ್ತ ಸಾವಿರಾರು ಸ್ವರಗಳು,ವಿಚಾರಗಳು ಮತ್ತೆ ಕೆಲವು ವಿಕಾರಗಳು,ಬದುಕಿನ ಅವಸರಗಳು ತಿಳಿದೂ ಮಾಡುವ ಅವಘಡಗಳು, ಅರಿಯದೆ ಬರುವ ಅಪಘಾತ, ಆಘಾತಗಳು ನಾನು ಎಂಬ ಆತ್ಮಪ್ರತಿಷ್ಟೆ, ನನ್ನದೆ ಸರಿ ಎಂಬ ಮೂಢನಿಷ್ಠೆ ಪರರ ಬಗೆಗೆ ದಿವ್ಯನಿರ್ಲಕ್ಷ ,ನಿಕೃಷ್ಟತೆ ಈ ಜಗವೇ ವೈಪರೀತ್ಯ,ಇಲ್ಲಿಯರ ವರ್ತನೆಗಳೆಲ್ಲ ವಿಚಿತ್ರ ಈ ಜೀವಿಗಳೇ ಅಶಾಂತಿಯ ಕೂಪ, ಇವರ ಗುಣವೇ ವೈರುಧ್ಯ ನಮಗೆ ಅತಿಯಾಸೆಯಿಲ್ಲ, ನಾವೇ ಮೇಲೆಂಬ ಹಮ್ಮಿಲ್ಲ ಸಾವು ನೋವಿನ ಹಂಗಿಲ್ಲ, ಸರಿ ತಪ್ಪಿನ ಗೊಂದಲವಿಲ್ಲ ನನಗೆ ನನ್ನ ಲೋಕವೇ ಚೆನ್ನ, ನನ್ನವರೇ ನನಗೆ ಚಿನ್ನ ನಾವಿಲ್ಲಿ ಸುಖಿಗಳು, ಸಂತುಷ್ಟರು ಸನ್ಮಿತ್ರರು ನೀಚ ನರನೆ ನೀನು ಪರಮ ಪಾಪಿ, ನೀನೊಂದು ಪಾತಕ ಇಲ್ಲಿ ಬಂದು ಕೆಡಿಸದಿರು, ನನ್ನ ನಿಷ್ಕಲ್ಮಶ ಪವಿತ್ರ ಲೋಕ.
----------------------------------
ನೋಂದಣಿ ಐಡಿ : KPFS2-9292