ಧರೆಗಿಳಿದ ನಾಕ
ರಚನೆ : ನಾಗೇಂದ್ರ ಪ್ರಸಾದ್ ಕೆ ವಿ
----------------------------------
ಬಣ್ಣಿಸಲಸದಳ ಕರುನಾಡ ಸೊಬಗು ಕಣ್ಣಿಗ್ಹಬ್ಬವು ವನಸಿರಿಯ ಬೆಡಗು ಬಣ್ಣದಂಗಳದ ರಂಗ ಪ್ರಪಂಚದ ಮೆರುಗು ಮಣ್ಣಿನಾ ಗುಣಕೆ ಎಂಥವರೂ ಬೆರಗು ಪಡುವಣದಿ ವಿಸ್ತಾರದ ಭವ್ಯ ಕರಾವಳಿ ಮೂಡಣದಿ ಸ್ವರ್ಣ ನಿಧಿಯ ಪ್ರಭಾವಳಿ ತರುಲತೆಯು ತೂಗಿ ತೀಡಿದೆ ಸುಳಿಗಾಳಿ ಬಿಡಿಸಿದೆ ಕೊಡಗು ಕಾಶ್ಮೀರದ ಚಿತ್ರಾವಳಿ ಕೃಷ್ಣೆ ತುಂಗೆ ಕಾವೇರಿ ಜೀವನದಿಯ ಒಡನಾಡಿ ಬೆಳ್ನೊರೆಯ ಝರಿ ತೊರೆ ನಾಡಿನ ಜೀವನಾಡಿ ಹಚ್ಚ ಹಸಿರಿನ ಕಾನನದ ಸೆಳೆತದ ಮೋಡಿ ಪ್ರಕೃತಿಯ ಸೌಂದರ್ಯದಿ ವಿಹರಿಸಿದೆ ಬಾನಾಡಿ ಹಲವು ಜನ್ಮದ ತಪಸಿನ ಫಲವೀ ನೆಲದಿ ಜನನ ಮರುಜನ್ಮದೀನಾಡಲಿ ಹುಟ್ಟು ಬಯಸಿದೆ ಮನ
----------------------------------
ನೋಂದಣಿ ಐಡಿ : KPFS2-9245