Submission 5998

ಭಿಕ್ಷುಕ

ರಚನೆ : ತ್ರಿವೇಣಿ ಪರುತಪ್ಪ ಭೂಸರಡ್ಡಿ

----------------------------------

ಬೀದಿ ಬೀದಿ ತಿರುಗಿ ಬೇಡುತಲಿರುನಾ ಹೊತ್ತು ಊಟಕ್ಕಾಗಿ ತುತ್ತು ಅನ್ನ ಕೇಳುತಲಿದೆ ಮನಾ ನನ್ನವಳ ಹಸಿವನ್ನು ನೀಗಿಸಲು ನಿಂತೇನಾ ರಕ್ತಸಂಬಂಧಗಳು ನೋಡಿ ನಾಚುತಿಹರು ನಮ್ಮನ್ನಾ ನನ್ನ ಬಾಗಿದ ಬೆನ್ನಿಗೆ ಕೋಲೇ ಆಧಾರ ನಾಳೆ ಹಣೆಬರಹವ ಹೇಗೆ ಬರೆದರೂ ಸೂತ್ರಧಾರ ದುಡಿಯಲು ಅಶಕ್ತರೆ ಎಂದು ತೆಗಳುವಿರಿ ಕೆಲಸ ಕೇಳಿದರೆ ಲಂಚ ಸುಲಿಗೆಯ ಭ್ರಷ್ಟದ ಹೊರೆ ಹೊರೆಸುವಿರಿ ಸುದ್ದಿ ಕೇಳದ ಸಮಾಜದ ನೆರಳಲ್ಲಿ ಬದುಕುತಿರುವೆ ಸೌಖ್ಯದ ಮನೆಯ ದಾರಿ ನನಗೆ ಇನ್ನೂ ಸಿಗುತಿಲ್ಲವೆ ನನ್ನ ಹರಿದ ಬಟ್ಟೆ ನೋಡಿದರೆ ಕಡಿಮೆ ಮನುಷ್ಯನಂತೆ ಕಾಣಬಹುದು, ಆದರೆ ಒಳಗಿನ ಕಥೆ ಕೇಳಿದರೆ ನಿನ್ನ ಹೃದಯವೂ ಒದ್ದೆಯಾಗಬಹುದು. ನೀವು ದೇವರಿಗೆ ದಕ್ಷಿಣೆನೀಡಿ ಕೇಳಿದರೆ ರಕ್ಷೆ ನಾವು ನಿಮ್ಮನ್ನು ಕೈವಡ್ಡಿ ಕೇಳಿದರೆ ಭಿಕ್ಷೆಯೆ! ಮೊದಲು ಮಾನವ ನೀ ಅರಿ ಇದು ಬದುಕೆ ನೀಡಿರುವ ಪರೀಕ್ಷೆ.

----------------------------------

ನೋಂದಣಿ ಐಡಿ : KPFS2-9244

0
Votes
90
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top