ನಾ ಬದುಕಲೇ ಬೇಕು
ರಚನೆ : ಶ್ವೇತ.ಬಿ.ಸಿ
----------------------------------
ನನ್ನೆದೆಯ ಅರಸ ಏನೆಂದರೂ ಸಹಿಸಿಕೊಂಡೆ, ಏಕೆಂದರೆ, 'ನಾ ಬದುಕಬೇಕು' ನನ್ನ ಎದೆಯೊಳಗೆ ಇಳಿದು ಎಂದಿಗೂ ನೀ ನನ್ನ ಅರಿಯಲಾರೆ, ಆದರೂ, 'ನಾ ಬದುಕಬೇಕು' ನೀ ಕೊಡುವ ಬಾಹ್ಯ ಸೌಂದರ್ಯದ ಬೆಲೆ, ಮನಸಿನ ಸೌಂದರ್ಯಕಿಲ್ಲ ಎಂದು ಅರಿತಿದ್ದರು, 'ನಾ ಬದುಕಬೇಕು' ನನ್ನ ಕರುಳಿನ ಬಳ್ಳಿಗೋಸ್ಕರ, ನನ್ನ ಹೆತ್ತ ಕರುಳಿಗೋಸ್ಕರ, 'ನಾ ಬದುಕಬೇಕು' ನನ್ನಾಸೆಗೆ ಎಂದೂ ನೀ ಕೈಜೋಡಿಸುವುದಿಲ್ಲ ಎಂದು ನಾನರಿಯೆ, ಆದರೂ 'ನಾ ಬದುಕಬೇಕು' ಹೌದು, ನನ್ನ ಶರೀರದಲ್ಲಿ ಉಸಿರಿರುವವರೆಗೂ, ದೈವ ನನ್ನ ಕರೆಯುವವರೆಗೂ 'ನಾ ಬದುಕಬೇಕು'
----------------------------------
ನೋಂದಣಿ ಐಡಿ : KPFS2-9051