ಕನ್ನಡ ರಾಜ್ಯೋತ್ಸವ
ರಚನೆ : ಅಕ್ಷತಾ ಬಿ
----------------------------------
ಕನ್ನಡವೆಂಬ ನವ್ಯ ಭಾವ ಕರುನಾಡೇ ನಮ್ಮೆಲ್ಲರ ಜೀವ ಬಣ್ಣಿಸಲಾರೆ ಕರುನಾಡ ಅಂದವ ಪದಗಳೇ ನಾಚಿದವು ನೋಡಿ ನಿನ್ನಂದವ ಮೆರೆಯುತಿರಲಿ ಸಾವಿರಕಾಲ ನಿನ್ನ ವೈಭವ ಕೇಳಲೆಂತ ಇಂಪು ಕನ್ನಡದ ಚೆಂದವ ನಿಲ್ಲದಿರಲಿ ಎಂದೆಂದಿಗೂ ಕನ್ನಡ ಕಲರವ ಕನ್ನಡವೆಂಬ ಹೆಸರೇ ಒಂದು ಮುದ್ದಾದ ಅನುಭವ ಹಚ್ಚೋಣ ನಿತ್ಯವೂ ಕನ್ನಡದ ದೀಪವ ದಿನವೂ ಮೆರೆಯಲಿ ಈ ನಿನ್ನ ಉತ್ಸವ ಸಾರುತಿರಲಿ ಜಗದ ಮೂಲೆಗೂ ನಿನ್ನ ವೈಭವ ನಿನ್ನನ್ನು ಸಂಭ್ರಮಿಸುವ ಮುದ್ದಾದ ಹೆಸರೇ ರಾಜ್ಯೋತ್ಸವ
----------------------------------
ನೋಂದಣಿ ಐಡಿ : KPFS2-9052