Submission 5726

ಸೃಷ್ಟಿ ಗೀತೆ

ರಚನೆ : ಜಯಂತಿ. ಆರ್. ಅಂಬಲಿ

----------------------------------

ನವಮಾಸವು ಗೈದು ತಪವ ನವಜೀವವ ಮುದದಿ ಪೊರೆವ; ನವಪಲ್ಲವಿ ನಗುತ ಬರೆವ ಸೃಷ್ಟಿ ಕವಿತೆ ಮಧುರ ಗೀತೆ. ಮಾತೆ ಎಂಬ ಸವಿಯ ಭಾವ ಮೀಟಿ ಮಿಡಿವ ಪುಟ್ಟ ಜೀವ; ಮಮತೆ ಕುಡಿಯ ಹೊತ್ತು ನಲಿವ ಸೃಷ್ಟಿ ಕವಿತೆ ಭವ್ಯ ಗೀತೆ. ನಲಿವು ನೋವು ಮೀರಿ ಬೆಳೆವ ನಲವು ಚೆಲುವು ಬೀರಿ ಗೆಲುವ; ನಲುಮೆ ಒಲುಮೆ ತೋರಿ ನಗುವ ಸೃಷ್ಟಿ ಕವಿತೆ ರಮ್ಯ ಗೀತೆ. ಸೃಷ್ಟಿ ಜೀವ ಭಾವಗೀತೆ; ಸೃಷ್ಟಿ ಜನನಿ ದಿವ್ಯ ಗೀತೆ;

----------------------------------

ನೋಂದಣಿ ಐಡಿ : KPFS2-9040

0
Votes
82
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top