ಕಲ್ಲಿನೊಳಗಿನ ಶಿಲ್ಪಿಯ ಕನಸು
ರಚನೆ : ಪವಿತ್ರ ಉಮೇಶ್ ಆಚಾರ್ಯ
----------------------------------
ಶಿಲ್ಪಿಗಷ್ಟೇ ಗೊತ್ತು ಕಲ್ಲನ್ನು ಶಿಲೆಯಾಗಿಸುವ ಗುಟ್ಟು... ಅದಕಾಗೆ ಕಲ್ಲು ತಿನ್ನುತ್ತಲಿದೆ ಎಡೆಬಿಡದೆ ಪೆಟ್ಟು..... ಶಿಲ್ಪಿಯ ಬೆವರ ಹನಿ ಮುತ್ತು ಕಲ್ಲು ಸೋಕಿದಾಗ... ಬೆಳೆದಿರಬೇಕು ಕಲ್ಲಿಗೂ ಶಿಲ್ಪಿ ಜೊತೆ ಅನುರಾಗ... ಅದಕ್ಕೆ ಶಿಲ್ಪಿ ನೀಡಿದ ಏಟಿಗೆ ಬಗ್ಗುತ್ತಾ ಕೈಚಳಕಕ್ಕೆ ಬೇಕಾದ ರೀತಿ ಒಗ್ಗುತ್ತಾ ಅವನ ಕಲ್ಪನೆಯ ಆಕೃತಿಯಾಗಲೂ ಸಂಯಮದಿಂದ ಕುಳಿತಿದ್ದಾಳೆ..... ತಾ "ಶಿಲ್ಪಕಲೆ" ಹೆಸರಿಗೆ ಒಡತಿಯಾಗಲು ಒಳಗೊಳಗೆ ಪುಳಕಗೊಳ್ಳುತ್ತಾ.
----------------------------------
ನೋಂದಣಿ ಐಡಿ : KPFS2-9041