ನಮ್ಮೊಳಗೊಂದು ಹಣತೆ ಹಚ್ಚೋಣ
ರಚನೆ : ಅಚ್ಯುತ ರಾವ್ ಎಸ್ ಆರ್
----------------------------------
ಬಿರಿದ ಬಾಂಬಿನೊಳು ಬೆಂದುಳಿದವರಿಗೆ ರಕ್ಕಸ ಕ್ರೌರ್ಯಕೆ ನಲುಗಿದ ಹೆಣ್ಮನಗಳಿಗೆ ಬಾಲ್ಯದಿ ವಿವಾಹಕ್ಕೊಳಗಾದ ಬಾಲೆಯರಿಗೆ ಬಯಲೊಳು ಬಸಿರು ಬಿಡಲು ನೂಕಲ್ಪಟ್ಟವರಿಗೆ ಬಿಸಿಲ ಬೇಗೆಯಲ್ಲಿ ಬಸಿರು ಹಿಡಿದು ದುಡಿವ ತಡಿಕೆಗೆ ಬಿರುಗಾಳಿ ಪ್ರವಾಹದಿ ನಲುಗಿ ಬಯಲಾದವರಿಗೆ ವಿಧಿ ಲಿಖಿತ ಅನಾಥ ಹಸುಳೆ ಕಂದಮ್ಮಗಳಿಗೆ ಬಿರಿದ ಭೂಕಂಪನದಿ ನೊಂದು ಬರಡಾದವರಿಗೆ ತಮವು ಕಳೆದು ಉದಯಿಸುವ ಆದಿತ್ಯನಂತೆ ಹಿಮಕರಗಿ ಜೀವಾಮೃತವಾಗಿ ಹರಿಯುವಂತೆ ಮೇಘಮಾಲೆಯು ಕರಗಿ ಮರುಗಿ ಸುರಿವಂತೆ ತೊರೆ ಹಳ್ಳ ನದಿ ಹಸಿರುಕ್ಕಿಸಿ ಶರಧಿ ಸೇರುವಂತೆ ನಮ್ಮೊಳಗೊಂದು ಹಣತೆ ಹಚ್ಚಿ ಬೆಳಗೋಣ ಮಾನವತೆ ಮಡಿಲಿನೊಳು ಹಸಿರುಸಿರಾಗೋಣ
----------------------------------
ನೋಂದಣಿ ಐಡಿ : KPFS2-9028