Submission 5706

ಭಾವಯಾನ

ರಚನೆ : ಸುಪ್ರೀತಾ ಶೆಟ್ಟಿ

----------------------------------

ಹಸಿವೆಂದರೆ ಒಡಲ ಸಂಕಟವೇ, ಕಣ್ಣೀರೆಂದರೆ ಮನದ ನೋವ ಸೆಲೆಯೇ, ಕಂಗಳು ಹೊಳೆದರೆ ತಿಳಿಯುವುದು ಸಂತಸ, ತುಟಿಯರಳಿತೆಂದರೆ ಅಲ್ಲಿ ನಗುವಿನ ನಿವಾಸ, ಬೆರಳುಗಳ ತಿಕ್ಕಾಟದಲ್ಲಿ ಅಸಮಾಧಾನ, ಅಸಹನೆ, ಹುಬ್ಬು ಗಂಟಿಕ್ಕಿ ಕೋಪದ ತೋರಿಕೆ, ಕಾಲ್ಬೆರಳ ತುದಿಯಲ್ಲಿ ಚಿತ್ತಾರ ಬಿಡಿಸಿದರೆ, ಅಲ್ಲಿಹುದು ನಾಚಿಕೆಯ ಚೆಂದದ ಭಾವ, ಕುಸಿದು ಕುಳಿತು ಬಿಕ್ಕುತಿರೆ ಅರಿಯಬೇಕು ನೋವ, ಮಾತುಗಳು ಕರ್ಣಗಳಿಗೆ ಇಂಪೆನಿಸಿದರೆ ಆಪ್ತತೆ, ಸದ್ದಿಲ್ಲದೆ ತೋಳ ಬಳಸಿ ಹೆಜ್ಜೆಗೆ ಜೊತೆಯಾದರೆ ಆತ್ಮೀಯತೆ, ಈ ಜೀವವೇ ಹಾಗೇ ಎಷ್ಟೊಂದು ಭಾವಗಳ ಸಮ್ಮಿಶ್ರಣ, ಅನುಭವಗಳು ಅನುಭಾವಗಳಾಗಿ ಹೊರಹೊಮ್ಮುವುದೇ ಭಾವಯಾನ.

----------------------------------

ನೋಂದಣಿ ಐಡಿ : KPFS2-9025

0
Votes
87
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top