Submission 5676

ಬಣ್ಣದ ಚಿಟ್ಟೆ

ರಚನೆ : ಚಂದ್ರಶೇಖರ ಬಿ. ಎಸ್

----------------------------------

ಚಂದ ಚಂದದ ಚೆಲುವಿನ ಚಿಟ್ಟೆ ಬಣ್ಣ ಬಣ್ಣದ ಬಿಂಕದ ನಿಲುವೇ ಚಿತ್ತಾರದ ಚಿತ್ರ ಬಿಡಿಸಿದವರಾರೆ. ಹಿಡಿಯಲು ನಾ ಹೋದರೆ ಅಲ್ಲಿಂದ ಇಲ್ಲಿಗೆ ಹಾರುವೆ ಏಕೆ ಮಾನಿನಿಯಾ ಮುಂಗುರುಳಿನ ನಿಲುವಿಗೆ ನಿನ್ನ ಹೋಲಿಕೆ ಮಾಡಿದವರಾರೆ. ಕವಿ ಕಾಣುವ ಕಲ್ಪನೆಗೆ ಕವಿತೆಯ ವಸ್ತುವಾದೆ ಏಕೆ? ಅಷ್ಟೊಂದು ಸೊಗಸೆ ನಿನ್ನ ಮೈ ಮಾಟದ ರೂಪೆ. ನಿನ್ನ ಚಂಚಲತೆಯ ಚೆಲುವಿಗೆ ಬಾನ ಭಾಸ್ಕರನ ಮುಗುಳುನಗೆ ನಿನ್ನ ಆಲಿಂಗನಕ್ಕೆ ಅರಳಿ ನಿಂತವೇ ಕಾನನದ ಕುಸುಮಲತೆ.

----------------------------------

ನೋಂದಣಿ ಐಡಿ : KPFS2-9003

0
Votes
74
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top