Submission 5608

ಪ್ರಕೃತಿ

ರಚನೆ : ರೋಹಿಣಿ

----------------------------------

ಮುಗಿಲು ಸುರಿದ ಮೌನವನು ಊರುಹೋಡೆವ ಭುವಿ ಬಿಸಿಲು ಬರೆದ ಚಿತ್ರಕ್ಕೆ ಬಣ್ಣ ತುಂಬುವ ಗಾಳಿ ಇಬ್ಬನಿ ಹುಂಡ ದಿಟ್ಟಿಸಿ ಮುಂಗುರುಳು ತೀಡಿ ನಸುನಕ್ಕ ಭತ್ತದ ತೆನೆ ಗದ್ದೆ ಹಾಳಿಯ ಮದ್ಯೆ ಹೊಳೆವ ಅಪ್ಪನ ಹೆಜ್ಜೆ ಹೆಸರಿರದ ಹಕ್ಕಿ ಹೊಸ ಹಾಡು ಹೇಳಿದರೆ ಪದವಿರದ ಸಾಲು ಜಗವನ್ನೇ ತಬ್ಬುತಿದೆ ಕಿತ್ತ ಕಳೆ ಗಿಡದಲ್ಲೂ ಹೊಳೆಯುತ್ತಿದೆ ಕವಿತೆ

----------------------------------

ನೋಂದಣಿ ಐಡಿ : KPFS2-8970

0
Votes
75
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top