ಇರಬೇಕು. ಇರುವಂತೆ
ರಚನೆ : ವಾಣಿ
----------------------------------
ಇರಬೇಕು ಇರುವಂತೆ ನೇಸರನ ಹಾಗೆ ಜೀವನೋತ್ಸಾಹ ತುಂಬುತ್ತಾ ಹೊಸ ತನವ ಹರಡುತ್ತಾ ಗುರಿಯೆಡೆಗೆ ಸಾಗುತ್ತಾ ಇರಬೇಕು ಇರುವಂತೆ ಕುಸುಮದ ಹಾಗೆ ಬೆಳಕಿನೆಡೆಗೆ ಪಯಣಿಸುತ್ತಾ ಕ್ಷಣದ ಸುಖವ ಸವಿಯುತ್ತಾ ನಾಳಿನ ಚಿಂತೆ ಮರೆಯುತ್ತಾ ಇರಬೇಕು ಇರುವಂತೆ ಹೆಣ್ಣಿನ ಹಾಗೆ ನೋವಿನಲ್ಲೂ ನಸು ನಗುತ್ತಾ ತನ್ನವರಿಗಾಗಿ ಬಾಳುತ್ತಾ ತನ್ನ ಅಸ್ತಿತ್ವವನ್ನು ಬೆಳೆಸುತ್ತಾ
----------------------------------
ನೋಂದಣಿ ಐಡಿ : KPFS2-8971