Submission 5596

ತಪ್ಪು ಅವನದಲ್ಲವೇ..?

ರಚನೆ : ಹುಸೇನಬಾಷ ಗುಡಿಹೊಲ

----------------------------------

ಬಾನಲಿ ಹಾರುವ ಆಸೆ ಇಟ್ಟನು, ನೀರಲಿ ತೇಲುವ ಕನಸ ಕೊಟ್ಟನು, ಬಡತನದಲ್ಲಿ ಹುಟ್ಟು ಎಂದನು, ತಪ್ಪು ಅವನದಲ್ಲವೇ..? ಸುಂದರ ಮೂತಿಯ ಆಸೆ ಇಟ್ಟನು, ಚೆನ್ನಾಗಿ ಕಾಣುವ ಕನಸ ಕೊಟ್ಟನು, ಮೈ ತುಂಬಾ ಕರಿ ಬಣ್ಣ ಕೊಟ್ಟನು, ತಪ್ಪು ಅವನದಲ್ಲವೇ..? ಪ್ರೀತಿ ಪ್ರೇಮದ ಆಸೆ ಇಟ್ಟನು, ಜೊತೆಗೆ ಬಾಳುವ ಕನಸ ಕೊಟ್ಟನು, ಜಾತಿ ಧರ್ಮವ ಮಧ್ಯೆ ಇಟ್ಟನು, ತಪ್ಪು ಅವನದಲ್ಲವೇ..? ಯಾಕೆ ಕೊಟ್ಟೆ ಆಸೆಯಾ? ಯಾಕೆ ಕೊಟ್ಟೆ ನಿರಾಸೆಯಾ? ತಪ್ಪೋಪ್ಪಿಕೋ ದೇವನೇ,ಅಪರಾಧಿಯು ನೀನೆ..!

----------------------------------

ನೋಂದಣಿ ಐಡಿ : KPFS2-8964

19
Votes
162
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top